ಎಂಡಿಎಂಎ ಸಹಿತ ಇಬ್ಬರ ಬಂಧನ: ಕಾರು ವಶ

  ಕುಂಬಳೆ: ಜಿಲ್ಲೆಗೆ ಮಾದಕ ವಸ್ತುಗಳ ಸಾಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಬಿಗುಗೊಳಿಸಿದ್ದು, ಈ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿ ಎಂಎ ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಲ್ಪಾಡಿ ಪಚ್ಚಂಬಳ ದೀನಾರ್‌ನಗರದ ಮೊಯ್ದೀನ್ ಕುಂಞಿ (41), ಜೋಡುಕಲ್ಲಿನ ಫಾರೂಕ್ ಮೊಹಮ್ಮದ್ (44) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 112.170 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಮಾದಕವಸ್ತು ಸಾಗಿಸುತ್ತಿದ್ದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಾದಕವಸ್ತು ಸಾಗಾಟ ಬಗ್ಗೆ ಲಭಿಸಿದ ಮಾಹಿತಿಯ ಮೇರೆಗೆ ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್‌ರ ನೇತೃತ್ವದ ಪೊಲೀಸ್ ತಂಡ ನಿನ್ನೆ   ಜೋಡುಕಲ್ಲಿನಲ್ಲಿ  ನಡೆಸಿದ ವಾಹನ ತಪಾಸಣೆ ವೇಳೆ ಈ ಇಬ್ಬರನ್ನು ಬಂಧಿಸಲಾಗಿದೆ.

You cannot copy contents of this page