ಅಡೂರು: ಅಭಿವೃದ್ಧಿ ಯೋಜನೆ ಗಳನ್ನು ಜ್ಯಾರಿಗೊಳಿಸುವುದರಲ್ಲಿ, ಜನಕ್ಷೇಮಯೋಜನೆಗಳಿಗಾಗಿ ಮೊತ್ತ ಮೀಸಲಿಡುವುದರಲ್ಲಿ ಯಾವುದೇ ಪಕ್ಷಪಾತ ನೀತಿ ತೋರಿಸದ ಆಡಳಿತಾ ಧಿಕಾರಿಯಾಗಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿ ದರು. ವಿವಿಧ ಪೋಷಕ ಸಂಘಟನೆಗಳ ನೇತೃತ್ವದಲ್ಲಿ ವಯೋಜನರಿಗಾಗಿ ಆಯೋಜಿಸಿದ ರಾಷ್ಟ್ರೀಯ ವಯೋ ಶ್ರೀಯೋಜನಾ ಸ್ಕ್ರೀನಿಂಗ್ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಯುಷ್ಮಾನ್ ಭಾರತ್ ವಯೋಜನ ಇನ್ಶೂರೆನ್ಸ್ ಯೋಜನೆ ಸಹಿತವಿರುವ ಕೇಂದ್ರ ಸರಕಾರದ ಜನಕ್ಷೇಮ ಯೋಜನೆ ಗಳನ್ನು ಸೂಕ್ತ ಸಮಯದಲ್ಲಿ ಜ್ಯಾರಿಗೊಳಿ ಸಲು ರಾಜ್ಯ ಸರಕಾರ ಸಿದ್ಧವಾಗಬೇಕೆಂದು ಎಂ.ಎಲ್. ಅಶ್ವಿನಿ ಆಗ್ರಹಿಸಿದರು.
ಬಿಜೆಪಿ ವೆಳ್ಳರಿಕುಂಡ್ ಮಂಡಲ ಪ್ರಧಾನ ಕಾರ್ಯದರ್ಶಿ, ಪನತ್ತಡಿ ಪಂಚಾಯತ್ ಪ್ರತಿನಿಧಿ ಕೆ.ಕೆ. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ವೆಳ್ಳರಿಕುಂಡ್ ಮಂಡಲ ಉಪಾಧ್ಯಕ್ಷ ಒ. ಜಯರಾಮ್, ಜಿಲ್ಲಾ ಸಮಿತಿ ಸದಸ್ಯ ಸೂರ್ಯನಾರಾಯಣ ಭಟ್, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ಶಿಬು ಪಾಣತ್ತೂರು, ಭವ್ಯ ಜಯರಾಜ್, ರಜನಿದೇವಿ, ಡಾ. ಗೋಕುಲ್, ಅವಿನಾಶ್, ಡಾ. ಆಶಿಶ್, ವಿಘ್ನೇಶ್ ಮಾತನಾಡಿದರು.






