ಕಾಸರಗೋಡು: ನಗರಸಭೆ ವ್ಯಾಪ್ತಿಯ ಗೂಡಂಗಡಿಗಳಲ್ಲಿ ರಾತ್ರಿ ತಪಾಸಣೆ ತೀವ್ರಗೊಳಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶಿಗೆಲ್ಲ ವ್ಯಾಪಕವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ನಗರಸಭೆಯ ಆರೋಗ್ಯ ವಿಭಾಗದ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ಹೆಲ್ತ್ ಇನ್ಸ್ಪೆಕ್ಟರ್ ಮಧು ಕೆ., ಪಿಎಚ್ಐಗಳಾದ ವೈಶಾಖ್, ಮುಬಶಿರ, ನೌಫಿಯ ಎಂಬಿವರು ಸೇರಿದ ತಂಡ ಗೂಡಂಗಡಿಗಳ ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಎಂಬಿವುಗಳ ಬಗ್ಗೆ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಹೋಟೆಲ್, ಕೂಲ್ಬಾರ್ ಮೊದಲಾದ ಸಂಸ್ಥೆ ಗಳಲ್ಲೂ ತಪಾಸಣೆ ನಡೆಸಲಾಗುವುದೆಂದು ತಿಳಿಸಲಾಗಿದೆ.





