ಕಾಸರಗೋಡು: ಕೇರಳ- ಕರ್ನಾಟಕ ಗಡಿ ಗ್ರಾಮವಾದ ಚವರ್ಕಾಡ್‌ನಲ್ಲಿ ಹೊಸ ಅಂಚೆ ಕಚೇರಿ ಮಂಜೂರು ಮಾಡಬೇಕೆಂಬ ಬೇಡಿಕೆ ಮೂಡಿಬಂದಿದೆ. ಎಣ್ಮಕಜೆ ಪಂಚಾಯತ್‌ನ 1,2 ವಾರ್ಡ್‌ಗಳು ಒಳಗೊಂಡ ಈ ಪ್ರದೇಶದಲ್ಲಿ ಸುಮಾರು 4೦೦೦ಕ್ಕೂ ಅಧಿಕ ವಿಳಾಸಗಳ ಜನರು ವಾಸವಾಗುತ್ತಿದ್ದು, ಇದುವರೆಗೆ ಇಲ್ಲಿ ಅಂಚೆ ಕಚೇರಿ ಜ್ಯಾರಿಯಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಅಂಚೆ ಕಚೇರಿ ಇಲ್ಲದ ಕಾರಣ ಪತ್ರಗಳು ಹಾಗೂ ಸರಕಾರಿ ಸೂಚನೆಗಳು, ಆಧಾರ್‌ಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ದಾಖಲೆ ಗಳು, ಪಾಸ್‌ಪೋರ್ಟ್ ಸಂಬಂಧ ವಾದ ದಾಖಲೆಗಳು, ಇತರ ಅಂಚೆ ಸೇವೆಗಳು ಸಮಯಾನುಸಾರ ಲಭಿಸುವುದರಲ್ಲಿ ತೊಂದರೆ ಎದುರಿಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಆರಂಭಗೊಂಡರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಜನರಿಗೆ ಉಪಕಾರಪ್ರದ ವಾಗಬಹುದೆಂದು ಈ ಬಗ್ಗೆ ಸಮಾಜಸೇವಕ ಎಂ.ಎಚ್. ಆರೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿ ಅಂಚೆ ಕಚೇರಿ ಸ್ಥಾಪಿಸಲಿರುವ ಸಾಧ್ಯತಾ ಅಧ್ಯಯನ ನಡೆಸಿ ಅಗತ್ಯ ಕ್ರಮಗಳನ್ನು ಸ್ವೀಕರಿಸಿ ಶೀಘ್ರವೇ ಅಂಚೆ ಕಚೇರಿ ಮಂಜೂರು ಮಾಡಬೇಕೆಂದು ಸಂಬಂಧಪಟ್ಟವರಿಗೆ ನೀಡಿದ ಮನವಿಯಲ್ಲಿ ಆರೀಸ್ ಆಗ್ರಹಿಸಿದ್ದಾರೆ.






