ಕಾಸರಗೋಡು: ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಇನ್ನೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆಂಗಳ ನಾಲ್ಕನೇ ಮೈಲಿನ ಕರೋಡಿ ವೀಟಿಲ್ ಮುಹಮ್ಮದ್ ಅಬೂಬಕರ್ (26) ಬಂಧಿತ ಆರೋಪಿ. ವಿದ್ಯಾನಗರ, ಮೇಲ್ಪರಂಬ ಮತ್ತು ಆದೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಮಾದಕದ್ರವ್ಯ ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳನ್ನು ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಬಂಧಿಸಿ ವಿಚಾರಣೆ ರಹಿತವಾಗಿ ಜೈಲಿಗಟ್ಟಲಾಗುತ್ತಿದೆ. ಮಾದಕದ್ರವ್ಯ ವ್ಯವಹಾರ, ಮಾರಾಟ ಮತ್ತು ವಿತರಿಸುವುದನ್ನು ತಡೆಗಟ್ಟಲು ಪೊಲೀಸರು ಇಂತಹ ಕ್ರಮ ಕೈಗೊಳ್ಳುತ್ತಿದ್ದಾರೆ.ಈತ ಪಿಟ್ ಎನ್ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಈತನಕ ಬಂಧಿಸಲ್ಪಟ್ಟ ೨೦ನೇ ವ್ಯಕ್ತಿಯಾಗಿದ್ದಾನೆ.





