ಪೈವಳಿಕೆ: ಕೇಂದ್ರ ಸರಕಾರ ಉದ್ಯೋಗ ಖಾತರಿ ಯೋಜನೆ ಯನ್ನು ಬುಡಮೇಲುಗೊಳಿಸುತ್ತಿದೆ ಎಂದು ಆರೋಪಿಸಿ ಎನ್‌ಆರ್‌ಜಿ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಸಾಕ್ ಚಿಪ್ಪಾರ್ ಉದ್ಘಾಟಿಸಿದರು. ಸರಸ್ವತಿ ಎಲಿಯಾಣ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಏರಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ಲ ಪೈವಳಿಕೆ ಸ್ವಾಗತಿಸಿದರು. ನೇತಾರರಾದ ಐರಿನ್ ಜೋಸ್ಫಿನ್, ಅಶೋಕ ಭಂಡಾರಿ, ಚಂದ್ರ ನಾಯ್ಕ್, ಮಾತನಾಡಿದರು.







