ಉಪ್ಪಳ: ಮೀಂಜ- ಮಂಗಲ್ಪಾಡಿ ಪಂಚಾಯತ್ಗಳನ್ನು ಸಂಪರ್ಕಿಸುವ ದೇರಂಬಳ ಸೇತುವೆ ಕುಸಿದ ಸ್ಥಳಕ್ಕೆ ಶಾಸಕ ಎಕೆಎಂ ಅಶ್ರಫ್ರ ನೇತೃತ್ವದ ತಂಡ ನಿನ್ನೆ ಭೇಟಿ ನೀಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಅಳವಡಿಸಿ ನೂತನ ಸೇತುವೆ ಶೀಘ್ರ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ಲೋಕೋಪ ಯೋಗಿ ಇಲಾಖೆ, ಮೇಜರ್ ಮತ್ತು ಮೈನರ್ ಇರಿಗೇಶನ್ ಇಲಾಖೆ ಪ್ರತಿ ನಿಧಿಗಳ ಸಹಿತ ಶಾಸಕರು, ಜನಪ್ರತಿ ನಿಧಿಗಳು ಸ್ಥಳ ಸಂದರ್ಶಿಸಿದ್ದಾರೆ. ಈ ವೇಳೆ ಸ್ಥಳೀಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







