ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ, ಉಪ ಸಮಿತಿಗಳ ವಾರ್ಷಿಕ ಮಹಾಸಭೆ

ಕಾಸರಗೋಡು: ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಉಪಸಮಿತಿ ಗಳಾದ ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ ಜಿ ಗಣೇಶ ಆಚಾರ್ಯ ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಪ್ರವೀಣ್ ಕುಮಾರ್ ಆಚಾರ್ಯ ನಲ್ಕ ಮಂಡಿಸಿದರು.ಮಹಿಳಾ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ವನ್ನು ಕಾರ್ಯದರ್ಶಿ ಹೇಮಲತಾ ಗಣೇಶ ಆಚಾರ್ಯ ಮಂಡಿಸಿದರು.
ಆಡಳಿತ ಸಮಿತಿಗೆ ನೂತನ ಅಧ್ಯಕ್ಷ ರಾಗಿ ಭುವನೇಶ ಆಚಾರ್ಯ ತಾಳಿಪಡ್ಪು , ಕಾರ್ಯದರ್ಶಿಯಾಗಿ ಕೆ. ಜಿ .ಗಣೇಶ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಆಚಾರ್ಯ ನಲ್ಕ ಸೇರಿ ೨೧ಸದಸ್ಯರು ಪುನರಾಯ್ಕೆ ಯಾದರು
ನಿರ್ಮಾಣ ಹಂತದಲ್ಲಿರುವ ಸಭಾಂಗಣಕ್ಕೆ ಬಾಂಧವರ ಹೆಚ್ಚಿನ ಸಹಕಾರ ವನ್ನು ಕೋರಲಾಯಿತು. ಕೆ . ಸುರೇಂದ್ರ ಆಚಾರ್ಯ, ಪೆರ್ಣೆ ವಿಷ್ಣು ಆಚಾರ್ಯ , ಕಲ್ಮಾಡಿ ಸದಾಶಿವ ಆಚಾರ್ಯ, ವೇದಾವತಿ ಆಚಾರ್ಯ ಕಲ್ಮಾಡಿ, ಶೀತಲ್ ಕುಮಾರ್ ಆಚಾರ್ಯ, ಪುರೋಹಿತ ಹರಿಶ್ಚಂದ್ರ ಆಚಾರ್ಯ, ಪ್ರಭಾಕರ ಆಚಾರ್ಯ, ಮಧುಸೂದನ ಆಚಾರ್ಯ, ಮನಮೋಹನ ಆಚಾರ್ಯ, ವಿಘ್ನೇಶ್ ಆಚಾರ್ಯ, ರಾಘವ ಆಚಾರ್ಯ, ಲೋಕೇಶ ಆಚಾರ್ಯ ಮಾತನಾಡಿ ದರು. ವೆಂಕಟಕೃಷ್ಣ ಕಿರಣ ಆಚಾರ್ಯ ನಲ್ಕ ನಿರೂಪಿಸಿದರು. ವೇಣುಗೋ ಪಾಲ ಆಚಾರ್ಯ ನೆಕ್ರಾಜೆ ವಂದಿಸಿದರು.

RELATED NEWS

You cannot copy contents of this page