ದೆಹಲಿಯಿಂದ ಕಡಿಮೆ ಬೆಲೆಗೆ ಕಾರು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚನೆಗೈದ ಆರೋಪಿ ಬಂಧನ

ಕಾಸರಗೋಡು: ದೆಹಲಿಯಿಂದ ಕಡಿಮೆ ಬೆಲೆಗೆ ಇನ್ನೋವಾ ಕಾರುಗಳನ್ನು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚಿಸಿದ ಯುವಕನನ್ನು ಗುರುವಾಯೂರು ಪೊಲೀಸರು ಕಾಸರಗೋಡಿನಿಂದ ಬಂಧಿಸಿದ್ದಾರೆ.  ಕಾಸರಗೋಡು ಪಳ್ಳಿಕೆರೆ  ನಿವಾಸಿ ಮುಹಮ್ಮದ್ ತನ್ಸೀರ್ (32) ಎಂಬಾತನನ್ನು ಎಸ್‌ಎಚ್‌ಒ ವಿಪಿನ್ ಕೆ ವೇಣುಗೋಪಾಲ್‌ರ ನೇತೃತ್ವದಲ್ಲಿರುವ ಪೊಲೀಸ್ ತಂಡ ಬಂಧಿಸಿದೆ. ತಾಮರಯೂರ್  ನಿವಾಸಿ ಫೆಲಿಕ್ಸ್ ಆಂಟನಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ವಂಚಕರನ್ನು ಬಂಧಿಸಿದ್ದಾರೆ.  2024ರಲ್ಲಿ  ಪ್ರಕರಣಕ್ಕೆ  ಕಾರಣವಾದ ಘಟನೆ ನಡೆದಿದೆ. ಕಡಿಮೆ ಬೆಲೆಗೆ ೩ ಇನ್ನೋವಾ ಕಾರುಗಳನ್ನು  ಖರೀದಿಸಿ ನೀಡುವುದಾಗಿ ತಿಳಿಸಿ ಫೆಲಿಕ್ಸ್ ಆಂಟನಿ ಕೈಯಿಂದ ತನ್ಸೀರ್ ೨೨ ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದನೆನ್ನಲಾಗಿದೆ.

ಆದರೆ ಮೂರು ಕಾರುಗಳ ಬದಲಿಗೆ ಒಂದು ಕಾರು ಮಾತ್ರವೇ ನೀಡಲಾಗಿದೆ.  ಅನಂತರ ಮುಹ ಮ್ಮದ್ ತನ್ಸೀರ್‌ನನ್ನು ಫೋನ್‌ನಲ್ಲಿ ಸಂಪರ್ಕಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇದರಿಂದ ತಾನು ವಂಚನೆಗೊಳಗಾಗಿರುವುದಾಗಿ ಫೆಲಿಕ್ಸ್ ಆಂಟನಿಗೆ ಮನವರಿಕೆ ಯಾಯಿತು. ಈ ಹಿನ್ನೆಲೆಯಲ್ಲಿ ವಂಚನೆ ಬಗ್ಗೆ ದೂರು ನೀಡಲಾಗಿದೆ. ಹಣ ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಗುಪ್ತ  ಮಾಹಿತಿ ಆಧಾರದಲ್ಲಿ ಪೊಲೀಸರು ಕಾಸರಗೋ ಡಿನಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಆತನ ಬಂಧನ ದಾಖಲಿಸಿ ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಯಿತು.

RELATED NEWS

You cannot copy contents of this page