ಮೊದಲು ಉಪಯೋಗ, ಬಳಿಕ ವ್ಯಾಪಾರ: ಕಮಿಶನ್ ವ್ಯವಸ್ಥೆಯಲ್ಲಿ ಎಂಡಿಎಂಎ ಮಾರಾಟ ಮಾಡಿದ ಅಧ್ಯಾಪಿಕೆಯರ ತಂಡದ ಇನ್ನೋರ್ವೆ ಬಲೆಗೆ; ಕೀರ್ತನಳ ಖಾತೆಗೆ ತಲುಪಿದ್ದು ಲಕ್ಷಾಂತರ ರೂ.

ಕಲ್ಲಿಕೋಟೆ: ಎಂಡಿಎಂಎ ಪ್ರಕರ ಣದಲ್ಲಿ ಸೆರೆಯಾದ ಅಧ್ಯಾಪಿಕೆಯರ ಬಗ್ಗೆ ಇನ್ನಷ್ಟು ಮಾಹಿತಿಗಳು ಬಹಿರಂ ಗವಾಗುತ್ತಿದೆ. ಇನ್‌ಸ್ಟಾಗ್ರಾಮ್ ಮೂಲಕ ಮಂಗಳೂರಿನ ಮಾದಕ ಮಾಫಿಯಾದೊಂದಿಗೆ ಇವರು ಸಂಪರ್ಕ ಬೆಳೆಸಿದ್ದರು. ಮೊದಲು ಮಾದಕ ಮಾಫಿಯ ತಂಡ ಇವರಿಗೆ ಎಂಡಿಎಂಎ ಉಪಯೋಗಿಸಲು ನೀಡಿತ್ತು. ಅದು ಇಷ್ಟವಾದಾಗ ಇವರು ಮಾರಾಟದಲ್ಲೂ ಸಕ್ರಿಯರಾ ದರು. ಇದಕ್ಕೆ ಇವರಿಗೆ ಭಾರೀ ಮೊತ್ತ ಕಮಿಷನ್ ಆಗಿ ನೀಡಲಾಗುತ್ತಿತ್ತು. ಇವರಿಬ್ಬರು ಅಧ್ಯಾಪಿಕೆಯರಾದ ಕಾರಣ ಇವರನ್ನು ಮಾಫಿಯಾ ಸೂಕ್ತವಾಗಿ ಬಳಸಿಕೊಂಡಿತು. ಇವರಿಬ್ಬರು ವಿವಾ ಹಿತರಾಗಿದ್ದರೂ ಪತಿಯಿಂದ ದೂರ ವಿದ್ದರು. ಎಂಡಿಎಂಎ ಖರೀದಿಸುವವರು ಖಾತೆಗೆ ಪಾವತಿಸುವ ಹಣವನ್ನು ಇವರು ಸ್ವಂತ ಅಗತ್ಯಕ್ಕೆ ಉಪಯೋಗಿಸಿರು ವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಕಾವ್ಯ ಆಡಂಭರ ಕಾರನ್ನು ಖರೀದಿಸಿರುವುದರೊಂದಿಗೆ ಸ್ಥಳೀಯರಲ್ಲಿ ಶಂಕೆ ಮೂಡಿತ್ತು. ಕಾರು ಖರೀದಿಸಿ ರುವುದು ಕಾವ್ಯಳ ಹೆಸರಲ್ಲೋ ಅಥವಾ ಬೇರೆಯವರ ಹೆಸರಲ್ಲಾಗಿದೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾವ್ಯ ಹಾಗೂ ಕೀರ್ತನ ಅಲ್ಲದೆ ಇನ್ನೋರ್ವೆ ಅಧ್ಯಾಪಿಕೆ ಕೂಡಾ ಇವರ ಗೆಳತಿಯಾಗಿದ್ದಾರೆ. ಇವರು ಮೂವರು ಸೇರಿ ಮಂಗಳೂರು ಹಾಗೂ ಬೆಂಗಳೂರಿಗೆ ತೆರಳಿರುವುದಾಗಿಯೂ ಇದರ ಭಾವಚಿತ್ರಗಳು ಹಾಗೂ ಇತರ ವಿವರಗಳು ಪೊಲೀಸರಿಗೆ ಲಭಿಸಿದೆ. ಗೆಳತಿಯಾದ ಅಧ್ಯಾಪಿಕೆಯನ್ನು ಕೂಡಾ ಪೊಲೀಸರು ವಿಚಾರಣೆಗೊಳ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಿಕಟ ಸಂಬಂಧಿಕರಿದ್ದಾರೆ ಎಂದು ಶಾಲೆಯಲ್ಲಿ ತಿಳಿಸಿದ್ದು, ಇದರಿಂದ ಯಾರೂ ಕೂಡಾ ಸಂಶಯಿಸಲಿಲ್ಲ.

ಅಧ್ಯಾಪಿಕೆಯರು ಸೇರಿದ ಎಂಡಿಎಂಎ ಪ್ರಕರಣದ ತನಿಖೆಗಾಗಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಲಾಗಿದೆ. ನಾರ್ಕೋಟಿಕ್ ಸೆಲ್ ಡಿವೈಎಸ್‌ಪಿ ಟಿ. ಉತ್ತಮ್ ದಾಸ್ ಈ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದಾರೆಂದು ವರದಿ ನೀಡಿದ ಆಧಾರದಲ್ಲಿ ರೂರಲ್ ಎಸ್‌ಪಿ ಮೆರಿನ್ ಜೋಸೆಫ್ ತನಿಖಾ ತಂಡ ರೂಪೀಕರಿಸಿದ್ದಾರೆ. ಸೆರೆಯಾದವರು ಹಾಗೂ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುವುದು. ಈ ಇಬ್ಬರು ಅಧ್ಯಾಪಿಕೆಯರನ್ನು ಈಗಾಗಲೇ ಕರ್ತವ್ಯದಿಂದ ವಜಾ ಮಾಡಲಾಗಿದೆ.

RELATED NEWS

You cannot copy contents of this page