ಚೆಂಗಳ ಬಂಟರ ಸಂಘದಿಂದ ಆಟಿಡೊಂಜಿ ದಿನ ಆಚರಣೆ

ಮುಳ್ಳೇರಿಯಾ : ಬಂಟರ ಸಂಘ ಚೆಂಗಳ ಪಂಚಾಯತ್ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೈವಿದ್ಯ ಮಯ ರೀತಿಯಲ್ಲಿ ಆಚರಿಸಲಾಯಿತು. ಮಳೆಗಾಲದ ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ಆಚರಿಸಲಾಗುವ ಆಟಿ ತಿಂಗಳು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಕೃಷಿಯನ್ನೇ ಮೂಲ ಕಸುಬನ್ನಾಗಿಸಿ ಕೊಂಡಿರುವ ಬಂಟ ಸಮುದಾಯದವರು ಮಳೆ ತೀವ್ರಗೊಳ್ಳುತ್ತಿರುವ ಈ ತಿಂಗಳು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಚೆಂಗಳ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಸಂಜೀವ ರೈ ಬೀಜಂತಡ್ಕ, ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷ ನಾರಂಪಾಡಿ ಗುತ್ತು ಬಾಲಕೃಷ್ಣ ರೈ ಮತ್ತು ಲತಾ ಬಾಲಕೃಷ್ಣ ರೈ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಾರಂಪಾಡಿ ಗುತ್ತಿನ ಮನೆಯ ಗದ್ದೆ ಪರಿಸರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಪ್ರಾಂಶುಪಾಲ ರಾಜೇಂದ್ರ ಪ್ರಸಾದ್ ರೈ ಉದ್ಘಾಟಿಸಿದರು
ಬೆಳ್ಳೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಡಾ| ವಿದ್ಯಾ ಮೋಹನದಾಸ್ ರೈ ಆಟಿ ತಿಂಗಳ ಆಚರಣೆಯ ಕುರಿತು ವಿವರಿಸಿದರು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಬಂಟರ ಸಂಘದ ಸಹ ಕಾರ್ಯದರ್ಶಿ ಕಿರಣ್ ಮಾಡ ಆದÀÆರು, ವಲಯ ಸಂಘದ ಕಾರ್ಯದರ್ಶಿ ರವೀಂದ್ರ ರೈ ಮಲ್ಲಾವರ, ನಿವೃತ್ತ ಕಂದಾಯ ಅಧಿಕಾರಿ ರಾಮಣ್ಣ ರೈ ನೆಕ್ರಾಜೆ, ವಕೀಲ ಮನೋಜ್ ಆಳ್ವ ನೆಕ್ರಾಜೆ, ವಿಶ್ವನಾಥ ರೈ ಕರೋಡಿ, ಕೃಷ್ಣಾನಂದ ರೈ ನೆಕ್ರಾಜೆ, ಹಿರಿಯರಾದ ನಾರಂಪಾಡಿ ಗುತ್ತು ತ್ಯಾಂಪಣ್ಣ ಭಂಡಾರಿ, ರಾಧಾಕೃಷ್ಣ ರೈ ಮುಂಡಾಸು, ರತ್ನಾಕರ ಆಳ್ವ ಪುಂಡೂರು, ಶಂಕರ ಆಳ್ವ ಪಾಡಿ, ಜಗನ್ನಾಥ ಶೆಟ್ಟಿ ಪಾಡಿ, ಶ್ಯಾಮಲಾ ಎಸ್ ರೈ ಬೆಳ್ಳೂರು ಉಪಸ್ಥಿತರಿದ್ದರು. ಬಂಟರ ಸಂಘದ ಚೆಂಗಳ ಪಂಚಾಯತ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಕರೋಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಶ್ರೀಲತಾ ಡಿ ಭಂಡಾರಿ ನಿರೂಪಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಜ್ಯೋತಿ ರಾಜೇಶ್ ರೈ ವಂದಿಸಿದರು.
ಪ್ರತಿಭಾ ಪುರಸ್ಕಾರ, ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಗೌರವಾರ್ಪಣೆ ಆಯೋಜಿಸಲಾಗಿತ್ತು

RELATED NEWS

You cannot copy contents of this page