ಬದಿಯಡ್ಕ ಪಂ.ನಲ್ಲಿ ಹುದ್ದೆ ಖಾಲಿ: ಭರ್ತಿಗೆ ಸ್ಥಳೀಯಾಡಳಿತ ಸಚಿವರಿಗೆ ಅಧ್ಯಕ್ಷರಿಂದ ಮನವಿ

ತಿರುವನಂತಪುರ: ಬದಿಯಡ್ಕ ಪಂಚಾಯತ್ ಕಚೇರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇ ಕೆಂದು ಪಂ. ಅಧ್ಯಕ್ಷ ಶಂಕರ.ಡಿ ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಅವರಲ್ಲಿ ವಿನಂತಿಸಿದರು. ತಿರುವನಂತಪುರ ಸೆಕ್ರೆಟರಿಯೇಟ್‌ನ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇಂಜಿನಿಯರ್, ಓವರ್ಸಿಯರ್ ಮೊದಲಾದ ಹುದ್ದೆಗಳು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕಟ್ಟಡದ ನಂಬ್ರ, ಪರ್ಮಿಟ್, ವಾರ್ಷಿಕ ಯೋಜನೆಯ ಕೆಲಸಗಳು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ನಡೆಸಬೇಕು ಎಂದವರು ಒತ್ತಾಯಿಸಿದರು. ಈ ಬಗ್ಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿರುವುದಾಗಿ ಶಂಕರ ಡಿ. ತಿಳಿಸಿದ್ದಾರೆ.

RELATED NEWS

You cannot copy contents of this page