ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ಹೋಗಿ ಹಿಂತಿರುಗುತ್ತಿದ್ದ ಮಧ್ಯೆ ಬದಿಯಡ್ಕದ ಯುವಕ ನಾಪತ್ತೆ

ಬದಿಯಡ್ಕ: ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ತೆರಳಿದ ಯುವಕ  ಮನೆಗೆ ತಲುಪದೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಪೆರಡಾಲ ಪಂಜಿನಡ್ಕ ನಿವಾಸಿ ಕುಂಞಿರಾಮನ್ ಎಂಬವರ ಪುತ್ರ ರಾಜೇಶ್ (42) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ  ಅವರ ಸಹೋದರ ಅನಿಲ್ ಕುಮಾರ್  ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಅಯೋಧ್ಯೆಗೆ ಹೋಗಿದ್ದು ಅಲ್ಲಿಂದ ಅವರು ಊರಿಗೆ ಮರಳಿದ್ದರು. ಈ ಮಧ್ಯೆ ಜುಲೈ ೨೨ರಂದು ಸಂಜೆ ಮಧ್ಯಪ್ರದೇಶದ ಇಚ್ಚಾರ್ಸಿ ಎಂಬಲ್ಲಿ ಇಳಿದು ಅಲ್ಲಿಂದ ಬೇರೆ ಯಾವುದೋ ರೈಲಿಗೆ ಹತ್ತಿದ್ದಾರೆಂದೂ ಆದರೆ ಅವರು ಮನೆಗೆ ಮರಳಿ ತಲುಪಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page