ಎಡನೀರು ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಬದಿಯಡ್ಕ: ವರ್ತಮಾನದ ತಲ್ಲಣಗಳಿಗೆ ಕಾರಣಗಳನ್ನು ಪತ್ತೆ ಮಾಡುತ್ತಾ ಹೋದಲ್ಲಿ ಪರಿಹಾರಗಳು ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆದಿ ಶಂಕರರು ನೀಡಿದ ಸಂದೇಶಗಳು ನಮ್ಮ ಕಣ್ತೆರೆಸಿ ಬದುಕಿನ ಮೂಲ ಲಕ್ಷö್ಯದ ದಾರಿ ತೋರಿಸುತ್ತದೆ. ಶ್ರೀಶಂಕರರ ಸಂದೇಶಗಳನ್ನು ಪಾಲಿಸುತ್ತಾ ಬಂದಲ್ಲಿ ಆಂತರ್ಯದ ಸಂಘರ್ಷಗಳಿಗೆ ಉತ್ತರ ಕಂಡುಕೊಳ್ಳಬಹುದು. ಅವರ ಸಂದೇಶ ಗಳನ್ನು ಪಸರಿಸುವಲ್ಲಿ ಪೀಠಗಳು, ಮಠಾಧೀಶರ ಕೊಡುಗೆಗಳು ಸಮಾಜಕ್ಕೆ ಅತ್ಯಪೂರ್ವವಾದುದು ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯ ವ್ಯಕ್ತಪಡಿಸಿದರು.
ಎಡನೀರು ಮಠದ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮೊದಲ ದಿನವಾದ ನಿನ್ನೆ ಅಪರಾಹ್ನ ಮಠದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನದಲ್ಲಿ ವಿಶೇಷ ಸ್ಥಾನ ಪಡೆದಿರುವ ಎಡನೀರು ಸ್ವಾಮೀಜೀಸ್ ದಾವೆ ಶ್ರೀಮಠ ಆಧುನಿಕ ವ್ಯವಸ್ಥೆಗೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಒಂದು. ಕೇವಲ ಧಾರ್ಮಿಕ ಆಚರಣೆಗಷ್ಟೇ ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಶ್ರೀ ಸಚ್ಚಿದಾನಂದ ಭಾರತೀ ತೀರ್ಥರು ಕೈಗೊಳ್ಳುತ್ತಿರುವ ಬೆಂಬಲ, ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಉದ್ಯಮಿ ಬಲರಾಮ ಆಚಾರ್ಯ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಸುರೇಶ್ ನಾಯಕ್ ಪೂನಾ, ಉದ್ಯಮಿ ಕೃಷ್ಣಮೂರ್ತಿ ಮಂಜ ಹೈದರಾಬಾದ್, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ದುಬೈ ಉಪಸ್ಥಿತರಿದ್ದರು. ಈ ಸಂದರ್ಭ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆನೂರು ಅನಂತಕೃಷ್ಣ ಶರ್ಮಾರನ್ನು ಅಭಿನಂದಿಸಲಾಯಿತು. ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ಆಡಳಿತಾದಿ üಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಕರ್ನಾಟಕ ಶಾಸ್ತಿçÃಯ ಹಾಗೂ ಹಿಂದೂಸ್ಥಾನೀ ಶಾಸ್ತಿçÃಯ ಸಂಗೀತ ವಿಶೇಷ ಜುಗಲ್‌ಬಂದಿ ನಡೆಯಿತು.
ಇಂದಿನ ಕಾರ್ಯಕ್ರಮ- ಅಖಂಡ ಭಜನಾ ಸಂಕೀರ್ತನೆಯ ಅಂಗವಾಗಿ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ೬ ರಿಂದ ಶಿರಸಿಯ ನೂಪುರ ನೃತ್ಯ ಶಾಲೆಯ ವಿದುಷಿ ಅನುರಾಧಾ ಹೆಗಡೆ ಮತ್ತು ವಿದುಷಿ ಕೀರ್ತನಾ ಹೆಗಡೆ ಬಳಗದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

You cannot copy contents of this page