ಬಿಜೆಪಿಯಿಂದ ಗುರುನಮನ

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಹಾಗೂ ಪಂಚಾಯತ್ ಸಮಿತಿ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುಗಳಾಗಿ ಮಾರ್ಗದರ್ಶನ ಮಾಡಿದ, ಮಾಡುತ್ತಿರುವ ಗುರುಗಳನ್ನು ಗುರು ಪೂರ್ಣಿಮೆ ಪ್ರಯುಕ್ತ ಗೌರವಿಸಲಾಯಿತು.
ಭರತನಾಟ್ಯ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ, ಉಳುವಾನ ಶಂಕರ ಭಟ್, ರಾಘವ ಮಾಸ್ಟರ್ ಬೆರಿಪದವು, ಆನಂದ ಮಾಸ್ಟರ್ ತೂಮಿನಾಡು, ಬಾಯರು ರಮೇಶ್ ಶೆಟ್ಟಿ, ಸಂಜೀವ ಶೆಟ್ಟಿ ಮಾಡ, ಲಲಿತ ಟೀಚರ್, ರಾಮಚಂದ್ರ ಆಚಾರ್ಯ, ಚಂದ್ರಶೇಖರ ನಾಯಕ್, ಜೋಕಿಮ್ ಮೊಂತೇರೊ, ವಸಂತ ಭಟ್, ರಾಧಾಕೃಷ್ಣ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮೊದಲಾದವರನ್ನು ಸನ್ಮಾನಿಸಿ ಗುರು ವಂದನೆ ಸಲ್ಲಿಸಲಾಯಿತು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಕೆ.ವಿ ಭಟ್, ಪ್ರವೀಣಚಂದ್ರ ಬಲ್ಲಾಳ್, ಸುಬ್ರಹ್ಮಣ್ಯ ಭಟ್, ಯಾದವ ಬಡಾಜೆ, ಪದ್ಮನಾಭ ಕಡಪ್ಪುರ, ಹರಿಶ್ಚಂದ್ರ ಎಂ, ಬೆಜ್ಜ ಚಂದ್ರಹಾಸ ನೇತೃತ್ವ ನೀಡಿದರು.

You cannot copy contents of this page