ಬದಿಯಡ್ಕ: ಕಾಸರಗೋಡು ಬ್ಲಾಕ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರ ಕ್ವಾರ್ಟರ್ಸ್ನ ಮಲಿನ ಜಲ ಸಮೀಪದ ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ದೂರಲಾಗಿದೆ. ಪವಿತ್ರವಾದ ಬಾವಿಯ ನೀರನ್ನು ಕುಡಿಯುತ್ತಿದ್ದವರಿಗೆ ಹಲವು ವರ್ಷಗಳಿಂದ ನೀರಿನ ರುಚಿಯಲ್ಲಿ ವ್ಯತ್ಯಾಸಉಂಟಾದ ಹಿನ್ನೆಲೆಯಲ್ಲಿ ಕಲೆಕ್ಟರೇಟ್, ಪಂಚಾಯತ್, ಮಲಿನೀಕರಣ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿದೆ. ಕುಡಿಯುವ ನೀರಿನಲ್ಲಿ ಮಲಿನ ಜಲ ಬೆರಕೆಯಾಗುತ್ತಿದೆಯೆಂಬ ಸಂಶಯವನ್ನು ತಿಳಿಸಿದ್ದು, ಬಳಿಕ ಮಲಿನೀಕರಣ ನಿಯಂತ್ರಣ ಮಂಡಳಿ ಬಾವಿ ನೀರನ್ನು ಸಂಗ್ರಹಿಸಿ ಪರಿಶೀಲಿಸಿ ಆ ನೀರನ್ನು ಕುಡಿಯಕೂಡದೆಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಆ ಬಾವಿಯ ನೀರನ್ನು ಕುಡಿಯಕೂಡದು. ನೀರಿನಲ್ಲಿ ಜೈವಿಕ ಮಾಲಿನ್ಯದ ಪ್ರಮಾಣ ಅಪಾಯಕಾರಿ ರೀತಿಯಲ್ಲಿದೆ. ಬಾವಿಯನ್ನು ಶುಚಿಗೊಳಿಸಿ ರೋಗಾಣು ನಾಶಗೊಳಿಸಿ ಮತ್ತೆ ಗುಣಮಟ್ಟವನ್ನು ಪರಿಶೀಲಿಸಿ ಶುದ್ಧವೆಂದು ಖಚಿತಪಡಿಸಿದ ಬಳಿಕವೇ ನೀರು ಕುಡಿಯಬಹುದು’ ಎಂದು ಬಾವಿಯ ಮಾಲಕ 2025ರಲ್ಲಿ ಸಲ್ಲಿಸಿದ ದೂರಿಗೆ ಮಲಿನೀಕರಣ ನಿಯಂತ್ರಣ ಮಂಡಳಿ 2026ರಲ್ಲಿ ಉತ್ತರ ನೀಡಿದೆ. ದೂರಿನಲ್ಲಿ ತಿಳಿಸಿದ ಬದಿಯಡ್ಕ ಮೇಲಿನ ಪೇಟೆಯ ತಾಜ್ ಅಪಾರ್ಟ್ಮೆಂಟ್ನ ತ್ಯಾಜ್ಯ ನಿರ್ಮೂಲನೆಗೆ ಸಂಬಂಧಪಟ್ಟು ಮಲಿನಜಲ ವೈಜ್ಞಾನಿಕವಾಗಿ ಸಂಸ್ಕರಿಸಲು ಹಾಗೂ ಮಲಿನ ಜಲವನ್ನು ಯಾವುದೇ ಕಾರಣಕ್ಕೂ ಹೊರಗೆ ಹರಿಯಬಿಡಕೂಡದೆಂದು ಮಂಡಳಿ ನಿರ್ದೇಶ ನೀಡಿರುವುದಾಗಿ ಬಾವಿಯ ಮಾಲಕ ಹಾಗೂ ದೂರುಗಾರನಾದ ಮುಹಮ್ಮದ್ ಶುಹೈಬ್ರಿಗೆ ಎನ್ವಯರ್ನ್ಮೆಂಟ್ ಇಂಜಿನಿಯರ್ ಲಿಖಿತವಾಗಿ ತಿಳಿಸಿದ್ದರು. ಕ್ವಾರ್ಟರ್ಸ್ ಮಾಲಕನಿಗೆ ನೀಡಿದ ತಾಕೀತು ಕೇವಲ ಕಡತದಲ್ಲೇ ಉಳಿದುಕೊಂಡಿ ದೆಯೆಂದು ನಾಗರಿಕರು ಹೇಳುತ್ತಿದ್ದಾರೆ. ಅನಂತರ ಅಲ್ಪ ಕಾಲ ಕ್ವಾರ್ಟರ್ಸ್ನ ಮುಂಭಾಗದ ರಸ್ತೆಯಲ್ಲಿ ಮಲಿನ ಜಲ ಹರಿಯಬಿಟ್ಟಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ರಾತ್ರಿವರೆಗೆ ದುರ್ನಾತ ವಿಲ್ಲದ ರಸ್ತೆಯಲ್ಲಿ ಬೆಳಿಗ್ಗೆ ನಡೆದಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಮಾತ್ರವಲ್ಲದೆ ಕ್ವಾರ್ಟರ್ಸ್ ಮಾಲಕ ಬ್ಲೋಕ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷನಾಗಿರು ವುದಾಗಿ ಹೇಳಲಾಗುತ್ತಿದೆ. ಪಕ್ಷಗಳ, ಪಂಚಾಯತ್, ಆಡಳಿತಾಧಿಕಾರಿಗಳ ಸ್ಥಿತಿಯ ಕುರಿತು ಬದಿಯಡ್ಕದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಕುಟುಂಬಗಳ ಕುಡಿಯುವ ನೀರು ಸಮಸ್ಯೆಯ ಬಗ್ಗೆ ನಿನ್ನೆ ಬದಿಯಡ್ಕ ಪಂಚಾಯತ್ ಆಡಳಿತ ಸಮಿತಿ ಸಭೆ ನಡೆಯುತ್ತಿದ್ದಂತೆ ಅಲ್ಲಿಗೆ ತಲುಪಿದ ದೂರುಗಾರ ಸಮಸ್ಯೆಯನ್ನು ವಿವರಿಸಿದ್ದಾರೆ. ರಾತ್ರಿವರೆಗೆ ದುರ್ನಾತವಿಲ್ಲದ ರಸ್ತೆಯಲ್ಲಿ ಬೆಳಿಗ್ಗೆ ನಡೆದಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಮಾತ್ರವಲ್ಲದೆ ಕ್ವಾರ್ಟರ್ಸ್ ಮಾಲಕ ಬ್ಲೋಕ್ ಪಂಚಾಯತ್ ಆರೋಗ್ಯಸ್ಥಾಯೀ ಸಮಿತಿ ಅಧ್ಯಕ್ಷನನ್ನಾಗಿಸಿರುವುದಾಗಿ ಹೇಳಲಾಗುತ್ತಿದೆ. ಪಕ್ಷಗಳ, ಪಂಚಾಯತ್, ಆಡಳಿತಾಧಿಕಾರಿಗಳ ಹಾಗೂ ಪ್ರಜಾಪ್ರಭುತ್ವದ ಸ್ಥಿತಿಯ ಕುರಿತು ಬದಿಯಡ್ಕದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಲವು ಕುಟುಂಬಗಳ ಕುಡಿಯುವ ನೀರು ಸಮಸ್ಯೆಯ ಬಗ್ಗೆ ನಿನ್ನೆ ಬದಿಯಡ್ಕ ಪಂಚಾಯತ್ ಆಡಳಿತ ಸಮಿತಿ ಸಭೆ ನಡೆಯುತ್ತಿದ್ದಂತೆ ಅಲ್ಲಿಗೆ ತಲುಪಿದ ದೂರುಗಾರ ಸಮಸ್ಯೆಯನ್ನು ವಿವರಿಸಿದ್ದಾರೆ.






