ಕಟಪಾಡಿ: ಗುರುವಿನ ಅನುಗ್ರ ಹವೇ ಬದುಕಿನ ಹುಣ್ಣಿಮೆ, ಗುರುವಿನ ಅನುಗ್ರಹವಿಲ್ಲದ ಬದುಕು ಅಮಾವಾಸ್ಯೆ. ಬದುಕಿನಲ್ಲಿ ಸುಖ, ಶಾಂತಿ ಮತ್ತು ಆತ್ಮಾನಂದವನ್ನು ಪಡೆಯಲು ಪ್ರತಿ ಯೊಬ್ಬರಿಗೂ ಗುರುವಿನ ಅನುಗ್ರಹ ಹಾಗೂ ಸಾನ್ನಿಧ್ಯ ಅಗತ್ಯವಾಗಿದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಪೀಠಾಧಿಪತಿ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಪಡುಕುತ್ಯಾರಿನ ಶ್ರೀಮಠ ದಲ್ಲಿ ಬುಧವಾರ ಆರಂಭಗೊAಡ ೨೨ನೇ ಚಾತುರ್ಮಾಸ್ಯ ವ್ರತಾಚರಣೆಯ ಮೊದಲ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದರು. ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಸುಭೇ ದಾರ್ ವೈ. ಧರ್ಮೇಂದ್ರ ಆಚಾರ್ಯ ಸೇರಿ ದಂತೆ ಗುರುಸೇವಾ ಪರಿಷತ್ತಿನ ಪ್ರಮುಖರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ಯ ಕಂ ಬಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ವಂದಿಸಿ ದರು. ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು.






