ಕಾಸರಗೋಡು: ವಿಸ್ಮಯ ಸೃಷ್ಟಿಸಿ ಪ್ರದರ್ಶನ ಮುಂದುವರಿಯುತ್ತಿರುವ ಭಾರತದ ಅತ್ಯಂತ ದೊಡ್ಡ ಜಂಬೋ ಸರ್ಕಸ್ ಇನ್ನು ಕೆಲವೇ ದಿನಗಳಲ್ಲಿ ಕಾಸರಗೋಡು ನಗರದ ಪ್ರದರ್ಶನ ಕೊನೆಗೊಳಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ದಿನಕ್ಕೆ ಮೂರು ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್‌ಗೆ ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಿಂದ ಜನ ತಲುಪಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆಗಳ ಕಾಲದ ಪ್ರದರ್ಶನದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಅಭ್ಯಾಸಗಳು ಇರುತ್ತದೆ. ಟಾನ್ಸಾನಿಯ, ಎಥಿಯೋಪಿಯ ಮೊದಲಾದ ದೇಶಗಳಿಂದಿರುವ ಅನುಭವಸ್ಥ ವಿದೇಶ ಕಲಾವಿದರು, ಭಾರತದ ವಿವಿಧ ರಾಜ್ಯಗಳ ೧೦೦ಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ.
ಆಗಸ್ಟ್ ೩ರಂದು ನಗರದ ಪ್ರದರ್ಶನ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಂಪು ರಿಯಾಯಿತಿ ಏರ್ಪಡಿಸಲಾಗಿದೆ. ಮಧ್ಯಾಹ್ನ 1ಗಂಟೆ, ಸಂಜೆ 4, ರಾತ್ರಿ 5 ಗಂಟೆ ಸಮಯಗಳಲ್ಲಿ ಪ್ರದರ್ಶನವಿದೆ.






