ಪೈಂಟಿಂಗ್ ಕಾರ್ಮಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪೈಂಟಿಂಗ್ ಕಾರ್ಮಿಕನಾದ ಯುವಕ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಡೂರು ಅಡ್ಕ ಚಾಕೋಟ್ ಎಂಬಲ್ಲಿನ ಅಭಿಲಾಷ್ (28) ಮೃತಪಟ್ಟ ಯುವಕ. ಕಳೆದ ನಾಲ್ಕು ದಿನಗಳಿಂದ ಇವರು ಕೆಲಸಕ್ಕೆ  ಹೋಗಿರಲಿಲ್ಲವೆನ್ನಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಯಾದರೂ ಬೆಡ್‌ರೂಂನ ಬಾಗಿಲು ತೆರೆಯದುದರಿಂದ  ಮನೆಯವರು   ನೋಡಿದಾಗ ಅಭಿಲಾಷ್ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಘಟನೆ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಪ್ಪಕುಂಞಿ-ಯಶೋಧ ದಂಪತಿಯ ಪುತ್ರನಾದ ಮೃತರು ಸಹೋದರ ಅಭಿಷೇಕ್, ಸಹೋದರಿ ಅಶ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page