ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಯುವತಿಯರು ಮೃತ್ಯು

ಕಾಸರಗೋಡು:  ಇಲಿ ವಿಷ ಸೇವಿಸಿ  ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಇಬ್ಬರು ಯುವತಿಯರು ಮೃತಪಟ್ಟ ಘಟನೆ ವೆಳ್ಳೇರಿಕುಂಡ್ ಹಾಗೂ ಪಡನ್ನಕ್ಕಾಡ್‌ನಲ್ಲಿ ನಡೆದಿದೆ. ಕಾಞಂಗಾಡ್ ಪಡನ್ನಕ್ಕಾಡ್  ಸಿಯಾರತ್ತಿಂಕ್ಕರ ಹೆಲ್ತ್ ಸೆಂಟರ್ ಸಮೀಪದ ಎಂ.ಕೆ. ಅಬ್ದುಲ್  ರಹ್ಮಾನ್ರ ಪುತ್ರಿ  ಎಂ.ಕೆ.ತಾಹಿರ (35)ಮೃತಪಟ್ಟ ಯುವತಿ.  ಜುಲೈ ೨೮ರಂದು ಮಧ್ಯಾಹ್ನ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಹಿರರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು.  ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆ ತಾನು ಇಲಿವಿಷ ಸೇವಿಸಿರುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ತಜ್ಞ ಚಿಕಿತ್ಸೆಗಾಗಿ ಈಕೆಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ  ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಮಧ್ಯೆ ಯುವತಿಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅಲ್ಲಿಂದ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ  ಕೊಂಡೊಯ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಳು.  ಘಟನೆಗೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ಇದೇ ವೇಳೆ  ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವೆಳ್ಳರಿಕುಂಡ್  ಆನಮಂಞಳ್ ಎಂಬಲ್ಲಿನ  ದೀಪ (22) ಎಂಬಾಕೆಯೂ ನಿನ್ನೆ ರಾತ್ರಿ ಮೃತಪಟ್ಟರು.  ಐದು ದಿನಗಳ ಹಿಂದೆ ಈಕೆ ಪತಿ ಮನೆಯಲ್ಲಿ ವಿಷ ಸೇವಿಸಿದ್ದರು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು ಪರಿಯಾರಂನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಕಲ್ಲಿಕೋಟೆಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ದೀಪ ಮೃತಪಟ್ಟಿದ್ದಾರೆ. ವೆಳ್ಳರಿಕುಂಡ್  ನಾಟೆಕಲ್ಲಿನ ಪದ್ಮನಾಭನ್-ಬಿಂದು ದಂಪತಿಯ ಪುತ್ರಿಯಾದ ದೀಪ ಪತಿ ಸತೀಶನ್,  ಮಕ್ಕಳಾದ ಶ್ರೀದೀಪ್ತ, ಶ್ರೀಯಾಂದೇವ್, ಸಹೋದರ ದೀಪು,ಸಹೋದರಿ ದಿವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page