ಪುತ್ತಿಗೆ ಪಂ.ಕಚೇರಿಗೆ ಎಲ್‌ಡಿಎಫ್‌ನಿಂದ ಮಾರ್ಚ್

 
ಪುತ್ತಿಗೆ: ಪುತ್ತಿಗೆ ಪಂಚಾಯತ್ ಆಡಳಿತ ಪಕ್ಷಪಾತ ನೀತಿ ಅನುಸರಿಸುತ್ತಿದೆಯೆಂದು   ಆರೋಪಿಸಿ ಎಲ್‌ಡಿಎಫ್ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಪಂಚಾಯತ್ ಗಳಿಗೆ ಲಭಿಸಬೇಕಾದ ಯೋಜನೆ ಮೊತ್ತವನ್ನು ಸರಕಾರ ಬುಡಮೇಲು ಗೊಳಿಸಿದೆ,  ಕಳೆದ ಪಂಚಾಯತ್ ಆಡಳಿತ ಸಮಿತಿ ಸ್ಥಾಪಿಸಿದ ಮಿನಿ ಮಾಸ್ಟ್ ಲೈಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದು ಹಾಗೂ ಎಡರಂಗ ಸದಸ್ಯರ  ವಾರ್ಡ್‌ಗಳಿಗೆ ಯೋಜನೆ ಮಂಜೂರು ಮಾಡದಿರುವುದನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕೃಷ್ಣ ಆಳ್ವ, ಡಿ.ಎನ್.  ರಾಧಾಕೃಷ್ಣ , ವಿಠಲ ರೈ, ಜಯಂತಿ, ಶಂಕರ ರೈ, ಅನಿತಾ, ಶಿವಪ್ಪ ರೈ, ಅಬ್ದುಲ್ ಮಜೀದ್, ಲಲಿತಾ, ರೂಪಾ ವಿ, ಬಶೀರ್ ಕೊಟ್ಟೂಡಲ್, ಸಂತೋಷ್ ಕುಮಾರ್ ನೇತೃತ್ವ ನೀಡಿದರು.

RELATED NEWS

You cannot copy contents of this page