ಪಿಎಸ್‌ಸಿ ಚೆಯರ್‌ಮೆನ್ ರಾಜೀನಾಮೆಗೆ ಒತ್ತಾಯಿಸಿ ಕೆಎಸ್‌ಯುನಿಂದ ಪಿಎಸ್‌ಸಿ ಕಚೇರಿಗೆ ಮಾರ್ಚ್

ಕಾಸರಗೋಡು: ಪಿಎಸ್‌ಸಿ ಚೆಯರ್‌ಮೆನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೆಎಸ್‌ಯು ಕಾರ್ಯಕರ್ತರು ನಿನ್ನೆ ಜಿಲ್ಲಾ ಪಿಎಸ್‌ಸಿ ಕಚೇರಿಗೆ ಮಾರ್ಚ್ ನಡೆಸಿದರು. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಜವಾದ್ ಪುತ್ತೂರು ನೇತೃತ್ವದಲ್ಲಿ ಕಾರ್ಯಕರ್ತರು ಮಾರ್ಚ್ ನಡೆಸಿದ್ದು ಅವರನ್ನು ಪೊಲೀಸರು ಬಂಧಿಸಿ ತೆರವುಗೊಳಿ ಸಿದರು. ಯೋಜನಾ ಮಂಡಳಿ ಪರೀಕ್ಷೆಗೆ ಸಂಬಂಧಿಸಿ ಪಿಎಸ್‌ಸಿ ಅಧಿಕಾರಿಗಳು ಗೂಢಾಲೋಚನೆ ನಡೆಸಿ ನೇಮಕಾತಿಯನ್ನು ಬುಡಮೇಲುಗೊಳಿಸಿದ್ದಾರೆಂದು ತಿಳಿಸಿ ಕ್ರೈಂ ಬ್ರಾಂಚ್ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಯು ಕಾರ್ಯಕರ್ತರು  ಪಿಎಸ್‌ಸಿ ಚೆಯರ್‌ಮೆನ್‌ರ ರಾಜೀನಾಮೆಗೆ ಒತ್ತಾಯಿಸಿ ಮಾರ್ಚ್ ನಡೆಸಿದ್ದಾರೆ.

ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು, ಕಾರ್ಯಕ ರ್ತರಾದ ನುಹ್‌ಮಾನ್ ಸುಲೈಮಾನ್, ಟಿ. ವಿಷ್ಣು, ಎಂ.ಮನು, ಎಸ್. ಸುಜಿತ್, ವೈಷ್ಣವ್, ಅಭಿನ್‌ಕೃಷ್ಣ ಮೊದಲಾದವರನ್ನು ಪೊಲೀಸರು ಬಂಧಿಸಿ ತೆರವುಗೊಳಿಸಿದರು.

You cannot copy contents of this page