ಸಿವಿಲ್ ಸ್ಟೇಶನ್ ಗೇಟ್ ಬಳಿ ಕಟ್ಟಿ ನಿಲ್ಲುವ ಕೊಳಚೆ ನೀರು: ಅಧಿಕಾರಿಗಳ ಮೌನದಿಂದ ಸಾರ್ವಜನಿಕರಿಗೆ ಸಮಸ್ಯೆ

ವಿದ್ಯಾನಗರ: ಜಿಲ್ಲೆಯ ಆಡಳಿತ ನಿರ್ವಹಣೆಯ ಪ್ರಧಾನ ಕೇಂದ್ರವಾದ ಸಿವಿಲ್ ಸ್ಟೇಷನ್ ಪರಿಸರ ಅವ್ಯವಸ್ಥೆಗಳ ಆಗರದಂತಾದರೂ ಅಧಿಕಾರಿಗಳು ಇದನ್ನು ನೋಡದಂತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಕಲೆಕ್ಟ್ರೇಟ್‌ಗೆ ಪ್ರವೇಶಿಸುವ ಗೇಟ್ ಬಳಿ ಮಳೆ ಸುರಿಯುವ ವೇಳೆ ನೀರು ಕಟ್ಟಿ ನಿಲ್ಲುತ್ತಿದ್ದು, ದಿನಂಪ್ರತಿ ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರು, ಸಿವಿಲ್ ಸ್ಟೇಶನ್ ನೌಕರರಿಗೆ ಬಹಳ ಸಮಸ್ಯೆಯಾಗುತ್ತಿದೆ.

ಸಿವಿಲ್ ಸ್ಟೇಶನ್ ಎದುರಿನ ರಸ್ತೆ ಯಾವತ್ತೂ ವಾಹನಗಳು ಹಾಗೂ ಜನಸಂದಣಿಯಿಂದ ಕೂಡಿರುತ್ತದೆ. ಈ ರಸ್ತೆ ಬದಿ ಕೊಳಕು ನೀರು ತಂಗಿ ನಿಲ್ಲುತ್ತಿದ್ದು, ವಾಹನ ಸಾಗುವಾಗ ನಡೆದು ಹೋಗುವವರಿಗೆ ಸಿಂಚನವಾಗುತ್ತಿದೆ. ರಸ್ತೆ ಬದಿಯಲ್ಲಿ ಪಾದಚಾರಿಗಳಿಗಾಗಿ ಕಾಲುದಾರಿ ಇಲ್ಲದಿರುವುದರಿಂದ ಜನರು ರಸ್ತೆಯಲ್ಲೇ ನಡೆದುಕೊಂಡು ಹೋಗಬೇ ಕಾಗುತ್ತಿದೆ. ಅಲ್ಲದೆ ಬದಿಯಲ್ಲಿರುವ ಮರಗಳ ರೆಂಬೆಗಳು ರಸ್ತೆಗೆ ಬಾಗಿದ್ದು, ರಸ್ತೆ ಬದಿ ಪೊದೆಗಳು ಬೆಳೆದಿವೆ. ಇದರಿಂದಾಗಿ ರಸ್ತೆ ಅಗಲ ಕಿರಿದಾಗಿದ್ದು, ನಿತ್ಯ ಇಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿರುವುದಾಗಿ ಸಾರ್ವಜನಿಕರು ತಿಳಿಸುತ್ತಾರೆ.

ಕಲೆಕ್ಟ್ರೇಟ್‌ನಿಂದ ಜಿಲ್ಲೆಯಾದ್ಯಂತ ಶುಚೀಕರಣಕ್ಕಾಗಿ ವಿವಿಧ ರೀತಿಯ ಸುತ್ತೋಲೆಗಳನ್ನು ಹೊರಡಿಸಲಾಗುತ್ತಿದ್ದು, ಆದರೆ ಸಿವಿಲ್ ಸ್ಟೇಶನ್ ಸುತ್ತು ಕಂಡು ಬರುವ ತ್ಯಾಜ್ಯ, ಮಲಿನ ಜಲ ಕಟ್ಟಿ ನಿಲ್ಲುವುದಕ್ಕೆ ಪರಿಹಾರ ಕೈಗೊಳ್ಳಲು ಇದುವರೆಗೂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ವಿವಿಧ ಸಾಂಕ್ರಾಮಿಕ ರೋಗಗಳು ಜಿಲ್ಲೆಯಾದ್ಯಂತ ಹರಡುತ್ತಿರುವಾಗ ಕೊಳಚೆ ನೀರನ್ನು  ತುಳಿದುಕೊಂಡು ಸಿವಿಲ್ ಸ್ಟೇಶನ್‌ಗೆ ಬರುವುದು, ಹೋಗುವುದು ಮಾಡಬೇಕಾಗುತ್ತಿರುವುದು ಜನರಲ್ಲಿ ಭೀತಿ ಹೆಚ್ಚಿಸಲು ಕಾರಣವಾಗುತ್ತಿದೆ. ಕಲೆಕ್ಟ್ರೇಟ್‌ನ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಲು ಅಸಾzs ವಾಗುವುದಕ್ಕೆ ಕಾರಣವೇನೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಪರಿಸರ ಶುಚೀಕರಣದ ಪಾಠ ಹೇಳುವವರು ಅದನ್ನು ಪಾಲಿಸಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

RELATED NEWS

You cannot copy contents of this page