ಯುವಕ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕನೋರ್ವ ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕಾಸರಗೋಡು ಅಶೋಕನಗರ  ಅಪ್ಪಯ್ಯ ನಿವಾಸ್‌ನ ದಿ| ವಾಮನ ಎಂಬವರ ಪುತ್ರ ಕೆ. ನಂದಿತ್ (45) ಸಾವಿಗೀಡಾದ ವ್ಯಕ್ತಿ.  ನಿನ್ನೆ  ರಾತ್ರಿ 10.30ರ ವೇಳೆ  ಇವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ  ರಕ್ಷಿಸಲಾಗಲಿಲ್ಲ. 

ಮೃತರು ತಾಯಿ ಮಹಾಲಕ್ಷ್ಮಿ, ಸಹೋದರ ರವಿಕಾಂತ್, ಸಹೋದರಿ ಅಶ್ವಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

You cannot copy contents of this page