ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊತ್ತ ಕಡಿತ: ಎಡರಂಗದಿಂದ ಮಂಜೇಶ್ವರ ಪಂ. ಕಚೇರಿ ಮಾರ್ಚ್

ಮಂಜೇಶ್ವರ: ಪಂಚಾಯತ್, ನಗರ ಸಭೆಗಳಲ್ಲಿ ಹೊಸ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಹಣ ಕಡಿತಗೊಳಿಸಿದ ಯು ಡಿ ಎಫ್ ಸರಕಾರ ವಂಚಿಸುತ್ತಿದೆ. ಇದರಿಂದ ಹೊಸ ಯೋಜನೆಗಳ ನಿರ್ವಹಣೆಗೆ ಮಾತ್ರವಲ್ಲದೆ ಹಲವಾರು ಕ್ಷೇಮ ಪಿಂಚಣಿ ಯೋಜನೆಗಳು ಬಡಮೇಲು ಗೊಂಡಿದೆ. ಕಾರುಣ್ಯ, ಕುಟುಂಬ ಆರೋಗ್ಯ ಕೇಂದ್ರಗಳಲ್ಲಿರುವ ಡಾಕ್ಟರ್ ಸೇವೆಗೆ, ಅಂಗನವಾಡಿ, ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಎಡರಂಗ ಪ್ರತಿಭಟಿಸಿದೆ.
ಮಾತ್ರವಲ್ಲದೆ ಲೈಫ್ ಪದ್ಧತಿ, ಕಳೆದ ಎಡರಂಗ ಸರಕಾರ ಮಹಿಳೆಯರಿಗೆ ಕೊಡುವ ೧೦೦೦ ರೂ ಪಿಂಚಣಿಯಾದ ಸ್ತ್ರೀ ಸುರಕ್ಷಾ ಪಿಂಚಣಿ ರದ್ದುಗೊಳಿಸಿದ್ದಕ್ಕೆ ಎದುರಾಗಿ ಎಡರಂಗ ಮಂಜೇಶ್ವರ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ಧರಣಿಯನ್ನು ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಜಯರಾಮ ಬಲ್ಲಂಗುಡೆಲ್ ಉದ್ಘಾಟಿಸಿದರು. ಗಣೇಶ ಅಧ್ಯಕ್ಷತೆ ವಹಿಸಿದರು. ಕಮಲಾಕ್ಷ ಕೆ ಸ್ವಾಗತಿಸಿದರು. ಕರುಣಾಕರ ಶೆಟ್ಟಿ, ಪ್ರಶಾಂತ್ ಕನಿಲ, ಅಶ್ರಫ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page