ಯಕ್ಷಗಾನ ಕಲಾವಿದ, ಸಾರಣೆ ಮೇಸ್ತ್ರಿ ಜಯೇಂದ್ರ ಆತ್ಮಹತ್ಯೆ

ಕುಂಬಳೆ: ಯಕ್ಷಗಾನ ಕಲಾ ವಿದ, ಸಾರಣೆ ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದ ಕಿದೂರು ದಂಡೆಗೋಳಿ ಮಂಜಲ್ಪಡ್ಪು ನಿವಾಸಿ ಜಯೇಂದ್ರ ಕೆ. (54) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ 9ರಿಂದ  6 ಗಂಟೆ ಮಧ್ಯೆ ಘಟನೆ ನಡೆದಿದೆ. ಇವರು ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಮನೆಮಂದಿ ಸಂಜೆ ವೇಳೆ ಬರುವಾಗ ಹಗ್ಗ ತುಂಡಾಗಿ ಕೊಠಡಿಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಚೆಂಗಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆ ನಿಧನರಾಗಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ ಆರು ವರ್ಷದಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಊರಿನಲ್ಲಿ ಸಾರಣೆ ಮೇಸ್ತ್ರಿಯಾಗಿ ಕೆಲಸ ಮಾಡಿ ಕೊಂಡಿದ್ದು, ಕಳೆದ ಒಂದು ತಿಂಗಳಿಂದ ಇವರು ಕೆಲಸಕ್ಕೆ ಹೋಗುತ್ತಿರಲಿಲ್ಲವೆಂದು ತಿಳಿದು ಬಂದಿದೆ. 

ಮೃತರು ಪತ್ನಿಯಂದಿರಾದ ಪ್ರೇಮ, ಪದ್ಮಾವತಿ, ಮಕ್ಕಳಾದ ವಿದ್ಯಾಶ್ರೀ, ಅಶ್ವಿನಿ, ಅಕ್ಷಿತ, ಹರ್ಷಿಣಿ, ಪಂಚಮಿ, ಅಳಿಯಂದಿರಾದ ಸದಾಶಿವ, ಪ್ರವೀಣ, ಗೋಪಾಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

RELATED NEWS

You cannot copy contents of this page