ಸ್ನೇಹಿತೆಯ 16ರ ಹರೆಯದ ಮಗಳಿಗೆ ಕಿರುಕುಳ ನೀಡಿದ ಯುವತಿ ಸೆರೆ: ಆರೋಪಿ ಯುವತಿ ವಿರುದ್ಧ 4ಪೋಕ್ಸೋ ಪ್ರಕರಣಗಳು

ಕಾಸರಗೋಡು: ಸ್ನೇಹಿತೆಯ 16ರ ಹರೆಯದ ಮಗಳಿಗೆ  ಕಿರುಕುಳ ನೀಡಿದ ಪ್ರಕರಣದಲ್ಲಿ ಯುವತಿ ಸೆರೆಗೀಡಾಗಿದ್ದಾಳೆ.  ತಳಿಪರಂಬ ಪುಳಿಪರಂಬ್ ನಿವಾಸಿಯಾದ ಸ್ನೇಹ ಮೆರ್ಲಿ (25) ಎಂಬಾಕೆಯನ್ನು ಮಾತಿಲ್ ಪೊಲೀಸರ ಸಹಾಯ ದೊಂ ದಿಗೆ ಮೇಲ್ಪರಂಬ  ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ ಬಂಧಿಸಿದೆ. 4 ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಸ್ನೇಹ ಮೆರ್ಲಿ ಮಾತಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರ ಮನೆಯಲ್ಲಿ  ವಾಸಿಸುತ್ತಿ ದ್ದಾಳೆಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಯುವತಿ ಸೆರೆಗೀಡಾಗಿ ದ್ದಾಳೆ.

ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ  ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ  ಸ್ನೇಹ ಮೆರ್ಲಿಯನ್ನು ಬಂಧಿಸಲಾಗಿದೆ.  ಈಕೆ ಬಾಲಕಿಯ  ತಾಯಿಯ  ಸ್ನೇಹಿತೆ ಯಾಗಿದ್ದಾಳೆ. ಕಣ್ಣೂರು ಜೈಲಿನಲ್ಲಿ  ಸ್ನೇಹ ಹಾಗೂ  ಬಾಲಕಿಯ ತಾಯಿ ಪರಿಚಯಗೊಂಡಿದ್ದರು. ಅನಂತರ  ಈ ಇಬ್ಬರು ಜೈಲಿನಿಂದ ಬಿಡುಗಡೆ ಗೊಂಡಿದ್ದರು. ಜೈಲಿನಲ್ಲಿ ಪರಿಚಯ ಗೊಂಡ ಹೆಸರಲ್ಲಿ ಸ್ನೇಹ ಒಂದು ವರ್ಷ ಕಾಲ ಬಾಲಕಿಯ ತಾಯಿ ಯೊಂದಿಗೆ ವಾಸಿಸಿದ್ದಳು. ಈ ಸಂದರ್ಭದಲ್ಲಿ ಬಾಲಕಿ ಕ್ರೂರವಾಗಿ ಕಿರುಕುಳಕ್ಕೊಳಗಾಗಿದ್ದಾಳೆ. ರಾತ್ರಿ ನಿದ್ರಿಸುತ್ತಿದ್ದ ವೇಳೆ ಬಾಲಕಿಗೆ ಆರೋಪಿ ಸ್ನೇಹ ಕಿರುಕುಳ ನೀಡಿದ್ದಳು.  ಆದರೆ ಭಯದಿಂದ ಬಾಲಕಿ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ಅನಂತರ ಶೆಲ್ಟರ್ ಹೋಂನಲ್ಲಿ ನಡೆಸಿದ ಕೌನ್ಸಿಲಿಂಗ್‌ನಲ್ಲಿ ಕಿರುಕುಳಕ್ಕೊಳಗಾದ ವಿಷಯವನ್ನು ಬಾಲಕಿ ಬಹಿರಂಗಪಡಿಸಿದ್ದಳು. ಈ ವಿಷಯವನ್ನು ಅಧಿಕಾರಿಗಳು  ಪೊಲೀಸರಿಗೆ ತಿಳಿಸಿದ್ದರು. ಅನಂತರ ಜೂನ್ 13ರಂದು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇದನ್ನು ತಿಳಿದ ಸ್ನೇಹ  ತಲೆಮರೆಸಿಕೊಂಡಿದ್ದಳು. ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿ ಮಾತಿಲ್‌ನಲ್ಲಿ ಇರುವುದಾಗಿ  ತಿಳಿದುಬಂದಿತ್ತು.  ಇದರಂತೆ ಪೊಲೀಸರು ಅಲ್ಲಿಗೆ ತಲುಪಿ ಆಕೆಯನ್ನು ಬಂಧಿಸಿದ್ದಾರೆ.

 ಸ್ನೇಹಳ ವಿರುದ್ಧ ಮೇಲ್ಪರಂಬ ಪೊಲೀಸರು ದಾಖಲಿಸಿಕೊಂಡಿರುವುದು ನಾಲ್ಕನೇ ಪೋಕ್ಸೋ ಪ್ರಕರಣವಾಗಿದೆ. ತಳಿಪರಂಬ ಠಾಣೆಯಲ್ಲಿ ಸ್ನೇಹಳ ವಿರುದ್ಧ ಮೂರು ಪೋಕ್ಸೋ ಪ್ರಕರಣಗಳಿವೆ. 2025 ಫೆಬ್ರವರಿಯಲ್ಲಿ  ಸ್ನೇಹ ಮೊದಲ ಬಾರಿಗೆ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ.

12ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ಅಂದು ಕೇಸು ದಾಖಲಿಸಲಾಗಿದೆ. ಬಾಲಕಿಯ ಬ್ಯಾಗ್‌ನಿಂದ ಲಭಿಸಿದ ಫೋನ್ ಪರಿಶೀಲಿಸಿದಾಗ ಅಧ್ಯಾಪಕರಿಗೆ ಸಂಶಯವುಂಟಾಗಿತ್ತು. ಅಲ್ಲದೆ ಬಾಲಕಿಯ ವರ್ತನೆಯಲ್ಲಿ ಸಂಶಯ ಗೊಂಡು  ಚೈಲ್ಡ್ ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅನಂತರ ನಡೆಸಿದ ಕೌನ್ಸಿಲಿಂಗ್‌ನಲ್ಲಿ  ಕಿರುಕುಳಕ್ಕೊಳಗಾದ ವಿಷಯವನ್ನು ಬಾಲಕಿ ತಿಳಿಸಿದ್ದಳು.  ಬಾಲಕಿಗೆ ಚಿನ್ನದ ಬ್ರೇಸ್‌ಲೆಟ್ ಖರೀದಿಸಿ ನೀಡಿದ ಬಳಿಕ ಆರೋಪಿ ಕಿರುಕುಳಗೈದಿದ್ದಾಳೆ. ಬಾಲಕಿಯ 15ರ ಹರೆಯದ ಸಹೋದರನಿಗೂ ಸ್ನೇಹ ಕಿರುಕುಳ ನೀಡಿದ್ದಾಳೆಂದು ಪತ್ತೆಹಚ್ಚಲಾಗಿದೆ. ಇದರಂತೆಯೂ ಸ್ನೇಹಳ ವಿರುದ್ಧ ಕೇಸು ದಾಖಲಿಸಲಾಗಿತ್ತು. ಅಲ್ಲದೆ 14ರ ಹರೆಯದ ಇನ್ನೋರ್ವ ಬಾಲಕನಿಗೂ ಕಿರುಕುಳ ನೀಡಿದ್ದು ಅದರ ದೃಶ್ಯಗಳನ್ನು ಫೋನ್‌ನಲ್ಲಿ ದಾಖಲಿಸಿ ಅನಂತರವೂ ಕಿರುಕುಳ ನೀಡಿರುವುದಾಗಿ  ದೂರಲಾಗಿದೆ. ಇದರಂತೆಯೂ  ಸ್ನೇಹಳ ವಿರುದ್ದ ತಳಿಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದರು. ತಳಿಪರಂಬದಲ್ಲಿ ಸಿಪಿಐ ನೇತಾರನಾದ ಕೋಮತ್ ಮುರಳೀಧರನ್ ಎಂಬವರಿಗೆ ಹಲ್ಲೆಗೈದ ಪ್ರಕರಣದಲ್ಲೂ ಸ್ನೇಹ ಆರೋಪಿಯಾಗಿದ್ದಾಳೆ.

RELATED NEWS

You cannot copy contents of this page