ಯುವತಿ ನಾಪತ್ತೆ

ಕುಂಬಳೆ: ಯುವತಿ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ತಿಲಕನಗರದ ಸುಭೋದಯ ಎಂಬವರ ಪುತ್ರಿ ಕಾಜಲ್ (25) ಎಂಬಾಕೆ ಆಗಸ್ಟ್ 5ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರ ಹೋದ ನಂತರ ಮನೆಗೆ ಹಿಂತಿರುಗಲಿಲ್ಲವೆಂದು ಆಕೆಯ ಸಹೋದರಿ ದೀಪ್ತಿ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ಕಾಜಲ್ ವಿವಾಹಿತೆಯಾಗಿದ್ದು, ಆಕೆ ಒಂದು ಮಗುವಿನ ತಾಯಿಯೂ ಆಗಿದ್ದಾಳೆ. ನಾಪತ್ತೆಯಾದ ಬಳಿಕ ಆಕೆ ಮನೆಯವರನ್ನು ಕರೆದು ಮಗುವನ್ನು ಕರೆದೊಯ್ಯಲು ಬರುವುದಾಗಿ ಆಕೆ ತಿಳಿಸಿದ್ದಾಳೆಂದೂ, ಅನಂತರ ಆಕೆಯ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ ಎಂದು ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page