ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ವ್ಯಾಪಾರಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಘಟಕದ ಅಧ್ಯಕ್ಷ ನರೇಂದ್ರನ್ ಧ್ವಜಾರೋಹಣಗೈದರು. ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವ್ಯಾಪಾರಿ ಸಂಗಮವನ್ನು ನರೇಂದ್ರನ್‌ರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಸಿ.ಐ ಅನೂಪ್‌ಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಸದಸ್ಯತ್ವ ವಿತರಣೆ ನಡೆಯಿತು.
ಮಾಜಿ ಅಧ್ಯಕ್ಷ ಎಸ್.ಎನ್. ಮಯ್ಯ, ಉಪಾಧ್ಯಕ್ಷ ರಾಜು ಸ್ಟೀಫನ್, ಹಮೀದ್, ಕಾರ್ಯದರ್ಶಿಗಳಾದ ಉದಯಶಂಕರ್, ವಿಶ್ವನಾಥನ್, ರತ್ನಾಕರ ಓಡಂಗಲ್ಲು, ಅಖಿಲೇಶ್ ನಗುಮುಗಂ, ಮಹಿಳಾ ವಿಭಾಗದ ಜಯಂತಿ ಚೆಟ್ಟಿಯಾರ್, ಕೃಪ, ಯುವ ವಿಭಾಗದ ಜಿಲ್ಲಾ ಕಾರ್ಯದರ್ಶಿ ಶಾಹಿದ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರವಿ ಸ್ವಾಗತಿಸಿ, ಕೋಶಾಧಿಕಾರಿ ಜ್ಞಾನದೇವ ಶೆಣೈ ವಂದಿಸಿದರು. ಹಿರಿಯ ವ್ಯಾಪಾರಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪ್ಲಸ್‌ಟು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವ್ಯಾಪಾರಿಗಳ ಮಕ್ಕಳು ಮತ್ತು ಸಂಸ್ಥೆಗಳ ಕಾರ್ಮಿಕರ ಮಕ್ಕಳನ್ನು ಅಭಿನಂದಿಸಲಾಯಿತು.







