ವೃದ್ಧನ ಆರೂವರೆ ಲಕ್ಷ ರೂಪಾಯಿ ಲಪಟಾವಣೆ; ಓರ್ವ ಸೆರೆ
ಕಣ್ಣೂರು : ಹಳೆಯ ಚಿನ್ನ ಮಾರಾಟಕ್ಕಿದೆ ಎಂದು ಸುಳ್ಳು ಹೇಳಿ ವೃದ್ದನನ್ನು ಕರೆಸಿ ಆರೂವರೆ ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ನಡೆದಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ತಲಶ್ಶೇರಿ ನಿವಾಸಿ ಅಶ್ರಫ್ (೪೧) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗಾಂಜಾ, ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮನ್ಸೂರ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಳಿಪರಂಬ ಕೀಳಾಟೂರಿನ ಕೆ.ಎಂ. ಅಗಸ್ಟ್ಯನ್(೬೦) ಎಂಬವರ ಹಣವನ್ನು ಲಪಟಾಯಿಸಲಾಗಿದೆ. ಘಟನೆ ಕುರಿತು ಪೊಲೀಸರು ರೀತಿ ತಿಳಿಸಿದ್ದಾರೆ. – ಹಳೆ ಚಿನ್ನಾಭರಣಗಳನ್ನು ಮಾರಾಟಗೈಯ್ಯುವುದಾಗಿ ತಿಳಿಸಿ ಅಶ್ರಫ್ನನ್ನು ಸೇರಿಸಿಕೊಂಡು ಮನ್ಸೂರ್ ಪಾಪಿನಿಶ್ಶೇರಿಗೆ ತಲುಪಿದ್ದಾನೆ. ಅನಂತರ ಅಗಸ್ಟ್ಯನ್ರನ್ನು ಅಲ್ಲಿಗೆ ಕರೆಸಲಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದಂತೆ ಅಗಸ್ಟ್ಯನ್ರ ಆರೂವರೆ ಲಕ್ಷ ರೂಪಾಯಿ ಒಳಗೊಂಡ ಬ್ಯಾಗನ್ನು ಲಪಟಾಯಿಸಿ ಆರೋಪಿಗಳು ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಅಗಸ್ಟ್ಯನ್ ನೀಡಿದ ದೂರಿನಂತೆ ನಡೆಸಿದ ತನಿಖೆಯಲ್ಲಿ ಅಶ್ರಫ್ನನ್ನು ಸೆರೆ ಹಿಡಿಯಲಾಗಿದೆ.