ಪೈವಳಿಕೆ: ಬಾಯಾರುಪದವು ಜಂಕ್ಷನ್‌ನಲ್ಲಿ ಹೈಮಾಸ್ಟ್ ದೀಪ ಕೆಟ್ಟು ಹೋಗಿ ಹಲವಾರು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬ್ಯಾಂಕ್‌ಗಳು, ಹಲವು ಅಂಗಡಿಗಳು , ಆಟೋ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು, ಜನನಿಬಿಡ ಪ್ರದೇಶವಾಗಿದೆ. ಈ ಪೇಟೆಯಲ್ಲಿ ರಾತ್ರಿ ೭ ಗಂಟೆಯ ನಂತರ ಸಂಪೂರ್ಣ ಕತ್ತಲು ಆವರಿಸಿ ಕೊಳ್ಳುತ್ತಿದೆ. ಲಕ್ಷಾಂತರ ಹಣ ವ್ಯವಯಿಸಿ ನಿರ್ಮಿಸಿದ ಈ ಬೀದಿ ದೀಪ ಈಗ ಉಪಯೋಗಶೂನ್ಯವಾಗಿದೆ. ಇಲ್ಲಿ ಬೀದಿ ದೀಪವಿಲ್ಲದೆ ನಾಗರಿಕರಿಗೆ, ಹಾಗು ವ್ಯಾಪಾರಿಗಳಿಗೆ ಅತೀವ ತೊಂದರೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ಕಳ್ಳರಿಗೆ ವರದಾನವಾಗಲಿದೆ. ಇದರ ದುರಸ್ತಿ ಕಾರ್ಯಕ್ಕೆ ಇಲ್ಲಿನ ಜನಪ್ರತಿ ನಿಧಿಗಳಾಗಲಿ, ಸಂಬAಧಪಟ್ಟ ಇಲಾಖೆಯವರಾಗಲಿ ಕೂಡ ಗಮನ ಕೊಡದೆ ಇರುವುದು ದುರದೃಷ್ಟಕರ ವೆಂದು ಭಾರತೀಯ ಜನತಾ ಯುವಮೋರ್ಚಾ ಹಾಗೂ ಬಿಎಂಎಸ್ ಪೈವಳಿಕೆ ಪಂಚಾಯತ್ ಸಮಿತಿ ತಿಳಿಸಿದೆ.







