ಕಾಸರಗೋಡು: ಅಮಿತ ಲಾಭ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ 17.31 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ವೃದ್ದರೊಬ್ಬರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಪಡನ್ನ ಕಡಪ್ಪುರ ನಿವಾಸಿ ವೃದ್ದ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ವಂಚನೆಗಾರರು ಇನ್‌ಸ್ಟಾ ಗ್ರಾಮ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನನ್ನು ಪರಿಚಯ ಗೊಂಡು ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿದ್ದಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ಆ ಬಗ್ಗೆ ಆನ್‌ಲೈನ್ ಮೂಲಕ ತರಗತಿಯನ್ನು ನಡೆಸಿದ್ದರು. ನಂತರ ಜೆ.ಬಿ. ಆನ್‌ಲೈನ್ ಅಪ್ಲಿಕೇಷನ್ ಮೂಲಕ ಶೇರ್ ಟ್ರೇಡಿಂಗ್ ಹೆಸರಲ್ಲಿ ವಂಚಕರು ನನ್ನ ಬ್ಯಾಂಕ್ ಖಾತೆಯಿಂದ ಜೂನ್ 22ರಿಂದ ಆಗಸ್ಟ್ 12ರ ನಡುವಿನ ವಿವಿಧ ದಿನಾಂಕಗಳ ಲ್ಲಾಗಿ ಒಟ್ಟು 17.31 ಲಕ್ಷ ರೂ. ಪಡೆದರೆಂದೂ, ನಂತರ ಲಾಭದ ಮೊತ್ತವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿರುವುದಾಗಿ ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದೂರುಗಾರ ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.






