ನಾಡಿನ ಸೌಹಾರ್ದತೆಗೆ ಓಣಂ ಹಬ್ಬ ದಾರಿದೀಪವಾಗಲಿ- ಸೋಮಶೇಖರ ಜೆ.ಎಸ್.

ನಲ್ಕ: ಕೇರಳದ ನಾಡಹಬ್ಬ ಓಣಂ ಆಚರಣೆ ಸಮಾಜದಲ್ಲಿ  ಸೌಹಾರ್ದತೆಯನ್ನು ಪೋಷಿಸುತ್ತದೆ. ಎಲ್ಲರೂ ಒಟ್ಟುಗೂಡಿ ಆಚರಿಸಿದಾಗ ಶಾಂತಿ ಸಂತೋಷದ ವಾತಾವರಣ ಪಸರಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅಭಿಪ್ರಾಯ ಪಟ್ಟರು. ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾ ಲಯ ಮತ್ತು ಊರವರ ಸಹಕಾರ ದಿಂದ ನಡೆದ ಓಣಂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಯÁಗಿ ಭಾಗವಹಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮೆಂಬರ್ ಪ್ರೇಮ ಎಸ್. ರೈ ಮಾತನಾಡಿದರು. ನಲ್ಕ ವಾರ್ಡ್ ಸದಸ್ಯ ಜಗದೀಶ್ ಕುಲಾಲ್ ಶುಭಾಶಂಶನೆ ಗೈದರು. ಊರಿನ ಹಿರಿಯ ನಾಗರಿಕರಾದ ಐತ ಬನಾರಿ ಹಾಗೂ ಮಮ್ಮುಂಞ  ನಲ್ಕರನ್ನು ಸನ್ಮಾನಿಸಲಾಯಿತು. ಲೈಬ್ರರಿ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದರು. ಶ್ವೇತಾ ಸ್ವಾಗತಿಸಿ, ಲೈಬ್ರೆರಿಯನ್ ಸುಷ್ಮಾ ವಂದಿಸಿದರು. ಶಿಕ್ಷಕ ಕಮಲಾಕ್ಷ ನಾಯಕ್ ನಿರೂಪಿಸಿದರು. ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಹೂವಿನ ರಂಗವಲ್ಲಿ, ಓಣಂ ಔತಣ ಏರ್ಪಡಿಸಲಾಯಿತು. ಕಾರ್ಯದರ್ಶಿ ಶಶಿಧರ ಕುಲಾಲ್ ನೇತೃತ್ವ ವಹಿಸಿದರು.

You cannot copy contents of this page