ಕಾಸರಗೋಡು: ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಚುಳ್ಳಿಕರೆಯಲ್ಲಿ ಓಣಂ ಆಚರಣೆಗೆ ಸಂಬಂಧಿಸಿ ನಡೆದ ಗಾನಮೇಳ ಮಧ್ಯೆ ಘರ್ಷಣೆ ನಡೆದಿದೆ. ತಡೆಯಲು ತಲುಪಿದ ಪೊಲೀಸರ ಮೇಲೂ ತಂಡ ಹಲ್ಲೆಗೈದಿದೆ. ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿದ ತಂಡ ಆರೋಪಿಗಳನ್ನು ಬಿಡುಗಡೆಗೊಳಿಸಿ ರುವುದಾಗಿಯೂ ದೂರಲಾಗಿದೆ. ಇಂದು ಮುಂಜಾನೆ 1 ಗಂಟೆಗೆ ಘಟನೆ ನಡೆದಿದೆ. ಗಾನಮೇಳ ನಡೆಯುತ್ತಿದ್ದಂತೆ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಅದು ಘರ್ಷಣೆಯಲ್ಲಿ ಕೊನೆಗೊಂಡಿತ್ತು. ಇದನ್ನರಿತು ರಾಜಪುರಂ ಎಸ್‌ಐ ಅಭಿಜಿತ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಈ ವೇಳೆ ಪೊಲೀಸರ ಮೇಲೂ ತಂಡ ಹಲ್ಲೆಗೆತ್ನಿಸಿದೆ.






