ಕಾಸರಗೋಡು: ಜಿಲ್ಲಾ ಓಣಂ ವಾರಾಚರಣೆ ನಿನ್ನೆ ಸಮಾಪ್ತಿಗೊಂಡಿತು. ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಸಿನಿಮಾ ನಟ ಉಣ್ಣಿರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಹನೀಫ್ ಕೆ.ಎಂ, ವಿವಿಧ ಬ್ಲೋಕ್ ಪಂ. ಅಧ್ಯಕ್ಷರಾದ ಸಿ. ಬಾಲನ್, ಅಬ್ದುಲ್ಲ ಕುಂಞಿ, ಯು.ಕೆ. ಸೈಫುಲ್ಲಾ ತಂಙಳ್, ಉಪಾಧ್ಯಕ್ಷೆ ಉಷಾ ಅರ್ಜುನ್, ಪಂಚಾಯತ್ ಅಧ್ಯಕ್ಷರಾದ ಯಶೋಧ, ವಸಂತ ಅಜಕ್ಕೋಡು, ಶಂಕರ ರೈ, ಮಾಲಿನಿ, ವಿ.ಪಿ. ಅಬ್ದುಲ್ ಖಾದರ್, ಆಯಿಷಾ ಅಬೂಬಕ್ಕರ್, ನಗರಸಭಾ ಕೌನ್ಸಿಲರ್ ರವಿ ಪೂಜಾರಿ ಮಾತನಾಡಿದರು. ಹಲವರು ಉಪಸ್ಥಿತರಿದ್ದರು.







