ಕಾಸರಗೋಡು: ಕೇಳುಗುಡ್ಡೆ ನಿವಾಸಿ ಎ.ವಿ. ಹರೀಂದ್ರನಾಥ್ (66) ನಿನ್ನೆ ನಿಧನಹೊಂದಿದರು. ದಿವಂಗತರಾದ ಉಪೇಂದ್ರನಾಥ್-ಗೋದಾವರಿ ದಂಪತಿಯ ಪುತ್ರನಾದ ಮೃತರು ಪತ್ನಿ ವಸಂತಿ, ಮಕ್ಕಳಾದ ಕೃಷ್ಣಪ್ರಸಾದ್, ಶಿವಪ್ರಸಾದ್, ಚೈತ್ರ, ಅಳಿಯ ಶಿವಪ್ರಸಾದ್, ಸೊಸೆಯಂದಿರಾದ ಪೂರ್ಣಿಮ, ನವ್ಯಶ್ರೀ, ಸಹೋದರ-ಸಹೋದರಿಯರಾದ ರಾಜೇಂದ್ರ ಕುಮಾರ್, ಜಗದೀಶ್, ಸರೋಜ, ವಿಜಯಲಕ್ಷ್ಮಿ, ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸಬಿತ ಈ ಹಿಂದೆ ನಿಧನರಾಗಿದ್ದಾರೆ.





