ಮುಳ್ಳೇರಿಯ: ಕೃಷಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಆದೂರು ಹೊಸಮನೆ ಸಂಜೀವ ಆಳ್ವ (80) ನಿಧನ ಹೊಂದಿ ದರು. ಶ್ರೀ ಪಂಚಲಿಂಗೇಶ್ವರ ಭಜನಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ಇವರು ಆದೂರು ಬಂಟರ ಸಂಘದ ಧನು ಪೂಜಾ ಸಮಿತಿಯ ನೇತೃತ್ವ ವಹಿಸಿ ದ್ದರು. ಕಾಂಗ್ರೆಸ್ನ ಹಿರಿಯ ಕಾರ್ಯ ಕರ್ತನಾಗಿದ್ದರು. ಮೃತರು ಪತ್ನಿ ವಸಂತಿ ಆಳ್ವ, ಮಕ್ಕಳಾದ ಕವಿತ, ಸರಿತ, ನಮಿತ, ಅಳಿಯಂದಿರಾದ ನವೀನ್ ರೈ ಪೆರಡಾಲ, ಅನೂಪ್ ಶೆಟ್ಟಿ ಪಂಜ, ಹರೀಶ್ ರೈ ಪೆರುವತ್ತೋಡಿ, ಸಹೋದರ ಜನಾರ್ದನ ಆಳ್ವ, ಸಹೋದರಿಯರಾದ ಶಾಂಭವಿ, ಪದ್ಮಾವತಿ, ಭಾಗೀರಥಿ, ಪುಷ್ಪಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






