ಸಿಪಿಐ ಸ್ಥಳೀಯನೇತಾರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸಿಪಿಐ ಕುತ್ತಿಕ್ಕೋಲು ಲೋಕಲ್ ಕಮಿಟಿ ಸದಸ್ಯ ಞೆರು ಚೆರಿಯಕಯ ಎಂಬಲ್ಲಿನ ಅಶೋಕನ್ (49) ಇಂದು ಬೆಳಿಗ್ಗೆ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೋಟೆಲ್‌ಗೆ ಚಹಾ ಕುಡಿಯಲು ತಲುಪಿದ ವ್ಯಕ್ತಿ ತಿಳಿಸಿದ ಮಾಹಿತಿಯಂತೆ ನಾಗರಿಕರು ಕೂಡಲೇ ತಲುಪಿ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಶೋಕನ್ ಹಲವು ವರ್ಷಗಳಿಂದ ಕುತ್ತಿಕೋಲ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು.

You cannot copy contents of this page