ಕುಂಬಳೆ: ಶಾಂತಿಪಳ್ಳ ನಿವಾಸಿ ಶಾಹುಲ್ ಹಮೀದ್ ಹಿಮಮಿ (29) ನಿಧನಹೊಂದಿದರು. ಎಸ್ಎಸ್ಎಫ್ ಕುಂಬಳೆ ಡಿವಿಶನ್ ಕಾರ್ಯದರ್ಶಿ ಯಾಗಿದ್ದರು. ಅಲ್ಲದೆ ಮುಹಿಮ್ಮಾತ್ ಕುಲ್ಲಿಯ್ಯ 2019 ಬ್ಯಾಚ್ನ ಹಿಮಮಿ ಪಂಡಿತನೂ, ಶಾಂತಿಪಳ್ಳದಲ್ಲಿ ಮುಹಿಮ್ಮಾತ್ನ ಅಧೀನದಲ್ಲಿರುವ ಸೆಕೆಂಡರಿ ಮದ್ರಸದ ಮುಅಲ್ಲಿಮ್ ಆಗಿದ್ದರು. ಮೃತರು ತಂದೆ ಅಬ್ಬಾಸ್, ತಾಯಿ ಖದೀಜ, ಸಹೋದರ-ಸಹೋ ದರಿಯರಾದ ಆಮಿನ, ಖೈರುನ್ನೀಸ, ಅಸ್ಮೀನ, ಶಹನಾ, ಶಂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಶಾಂತಿಪಳ್ಳ ತಖ್ವ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.






