ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಯಿಂದ ದೂರ ನಿಂತು ತನಿಖೆ ಎದುರಿಸಬೇಕು- ವಿ.ಕೆ. ಸಜೀವನ್

ಕಾಸರಗೋಡು: ಕಪ್ಪು ಮರಳು ಗಣಿಗಾರಿಕೆಗೆ ಸಂಬಂಧಿಸಿ ಅನಧಿಕೃತ ವ್ಯವಹಾರಗಳ ಮೂಲಕ ೩.೨೮ ಕೋಟಿ ರೂ. ಪುತ್ರಿಯ ಕಂಪೆನಿಯಾದ ಸಂಸ್ಥೆಯ ಮೂಲಕ ತಿಂಗಳ ವೇತನ ಸ್ವೀಕರಿಸಿರುವುದಾಗಿ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಗಳಿಂದ ದೂರವಿದ್ದು ತನಿಖೆ ಎದುರಿಸಬೇಕೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಆಗ್ರಹಿಸಿದರು. ರಾಜ್ಯದ ಕರಾವಳಿಯನ್ನು ಕೊಳ್ಳೆ ಹೊಡೆಯಲು ಒತ್ತಾಸೆಗೈದುದರ ಪ್ರತಿಫಲವಾಗಿ ಪಿಣರಾಯಿ ವಿಜಯನ್ ಈ ಮೊತ್ತವನ್ನು ಪಡೆದುಕೊಂಡಿರುವುದಾಗಿ ಸಜೀವನ್ ಆರೋಪಿಸಿದರು. ಪಿ.ಎಂ.ಎಲ್.ಎ ಆಕ್ಟ್ ಸೆಕ್ಷನ್ 66(2) ಪ್ರಕಾರ ಪಿಣರಾಯಿ ವಿಜಯನ್ ವಿರುದ್ಧ ಕೇಸು ದಾಖಲಿಸಲು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಕೇರಳ ಡಿಜಿಪಿಯವರಲ್ಲಿ ಕಾನೂನು ಪರವಾಗಿ ಆಗ್ರಹಿಸಿರುವುದಾಗಿದ್ದರೆ ಅದರ ಆಧಾರದಲ್ಲಿ ರಾಜ್ಯ ಪೊಲೀಸ್ ತುರ್ತಾಗಿ ಕೇಸು ನೋಂದಾಯಿಸಿ ತನಿಖೆ ಆರಂಭಿಸಬೇಕು. ತನಿಖಾ ಏಜೆನ್ಸಿಗಳ ಕ್ರಮಗಳನ್ನು ರಾಜಕೀಯವಾಗಿ ತಡೆಯೊಡ್ಡದೆ ತೀರ್ಮಾನಾನುಸಾರವಾಗಿ ತನಿಖೆ ನಡೆಸಲು ಸನ್ನಿವೇಷ ಸೃಷ್ಟಿಸಬೇಕು ಎಂದು ಅವರು ಆಗ್ರಹಿಸಿದರು. ಗಂಭೀರವಾದ ಆರೋಪಗಳು ಮೂಡಿ ಬಂದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕತ್ವದಲ್ಲಿ ಮುಂದುವರಿಯುತ್ತಿರುವುದು ತನಿಖೆಯ ವಿಶ್ವಾಸಕ್ಕೆ ತೊಡಕಾಗಲಿದೆ ಎಂದು ಸಜೀವನ್ ನುಡಿದರು. ಪಿಣರಾಯಿ ವಿಜಯನ್ ವಿಪಕ್ಷ ನಾಯಕತ್ವದಿಂದ ದೂರ ಉಳಿಯಲು ಸಿದ್ಧರಾಗದಿದ್ದರೆ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲು ಎಡರಂಗ ಸಿದ್ಧವಾಗಬೇಕೆಂದು ವಿ.ಕೆ. ಸಜೀವನ್ ಆಗ್ರಹಿಸಿದ್ದಾರೆ.

You cannot copy contents of this page