ಬಾಲಕೃಷ್ಣ ನಾಯ್ಕ್ ನಿಧನ

ಬೆಳ್ಳೂರು: ಕಿನ್ನಿಂಗಾರು ರೆಂಜೆಮೂಲೆ ಪರಿವಾರ ಬಂಟ ಸಮುದಾಯ, ಪುತ್ತಿಗೆ ತರವಾಡು ಮನೆಯ ಹಿರಿಯ ಸದಸ್ಯ ಬಾಲಕೃಷ್ಣ ನಾಕ್ (72) ನಿನ್ನೆ ನಿಧನ ಹೊಂದಿ ದರು. ವಾಣಿನಗರದ ಆನ್‌ಲೈನ್ ಸೇವಾ ಕೇಂದ್ರಕ್ಕೆ ಯಾವುದೋ ಕೆಲಸದ ನಿಮಿತ್ತ ಆಗಮಿಸಿದ್ದ ಇವರು ಅಲ್ಲಿಂದ ಹಿಂತಿರುಗುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ವನಿತ, ಮಕ್ಕಳಾದ ಚೇತನ್ ನಾಕ್, ಚೈತನ್ಯ, ಅಳಿಯ ಸುನಿಲ್, ಸೊಸೆ ಅಕ್ಷತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page