ಕಾಸರಗೋಡು: ಬಿಎಂಎಸ್ ಕಾರ್ಯಕರ್ತನಾದ ಕಾಸರಗೋಡು ನುಳ್ಳಿಪ್ಪಾಡಿ ಜೆ.ಪಿ ನಗರದ ಜ್ಯೋತಿಷ್ರನ್ನು 2013ರಂದು ಚೆರ್ಕಳ ಸಮೀಪದ ಸಂತೋಷ್ನಗರದಲ್ಲಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಕೊಯಂಬತ್ತೂರಿನಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ತಳಂಗರೆ ಪಳ್ಳಿಕ್ಕಾಲ್ ಪಡುಪ್ಪಿಲ್ ಹೌಸ್ನ ಅಬ್ದುಲ್ ಶಹೀರ್ ಅನಸ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಈ ಹಿಂದೆ ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಆತ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಅದರಿಂದಾಗಿ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(ಪ್ರಥಮ) ಆತನನ್ನು ತಲೆಮರೆಸಿಕೊಂಡಿರುವ ಆರೋಪಿಯನ್ನಾಗಿ ಘೋಷಿಸಿ ವಾರಂಟ್ ಜ್ಯಾರಿಗೊಳಿಸಿತ್ತು. ಅದರಂತೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಕೊಯಂಬತ್ತೂರಿನಿಂದ ಬಂಧಿಸಿದ್ದಾರೆ. ಬಿಎಂಎಸ್ ಕಾರ್ಯಕರ್ತನಾಗಿದ್ದ ಜ್ಯೋತಿಷ್ ವರ್ಷಗಳ ಹಿಂದೆ ಆತ್ಮಹತ್ಯೆಗೈದಿದ್ದರು.






