ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಬಸ್ ನಿಲ್ದಾಣದಿಂದ ಆರಂಭಿಸಿ ನಾಯಮ್ಮಾರ್ ಮೂಲೆವರೆಗಿ ರುವ ಸರ್ವೀಸ್ ರಸ್ತೆಯಲ್ಲಿ ಪೂರ್ಣವಾಗಿ ಏಕಮುಖ ರಸ್ತೆಯನ್ನಾಗಿ ಮಾಡಲು ಕಾಸರಗೋಡು ನಗರಸಭಾ ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ನಗರದ ಪ್ರಧಾನ ರಸ್ತೆಗಳಲ್ಲಿ ಕಂಡುಬರುವ ಸಂಚಾರ ತಡೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕ್ರಮಗಳ ಅಂಗವಾಗಿ ಈ ತೀರ್ಮಾನ ಉಂಟಾಗಿದೆ. ಪ್ರಸ್ತುತ ಈ ರಸ್ತೆಯ ಮೂಲಕ ಇಕ್ಕಡೆಗಳಿಗೂ ವಾಹನಗಳು ಸಂಚರಿಸುತ್ತಿವೆ. ಒಂದೇ ಸಮಯದಲ್ಲಿ ವಾಹನಗಳ ಇಕ್ಕಡೆ ಸಂಚಾರಗಳಿಂದಾಗಿ ತೀವ್ರ ಸಂಚಾರ ತಡೆಗೆ ಕಾರಣವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಶಿಫಾರಸು ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ಸಮರ್ಪಿಸಲಾಗಿದೆ. ಪ್ರಾಧಿಕಾರದ ಅಂತಿಮ ಅನುಮತಿ ಲಭಿಸುವುದರೊಂದಿಗೆ ಹೊಸ ಸಂಚಾರ ಕ್ರಮೀಕರಣ ಜ್ಯಾರಿಗೆ ಬರಲಿದೆ. ನಗರದಲ್ಲಿ ಸಂಚಾರ ಸಮಸ್ಯೆ, ಅಪಘಾತಗಳು ನಿತ್ಯ ಘಟನೆಯಾಗುತ್ತಿರುವುದರೊಂದಿಗೆ ಇದಕ್ಕಿರುವ ಪರಿಹಾರವೆಂಬ ನೆಲೆಯಲ್ಲಿ ನಗರಸಭೆ ತುರ್ತು ಪ್ರಾಮುಖ್ಯತೆಯಲ್ಲಿ ಈವಿಷಯ ಗಮನಕ್ಕೆ ತೆಗೆದಿದೆ. ತಳಂಗರೆ ನಿವಾಸಿಯಾದ ವ್ಯಾಪಾರಿ ಹನೀಫ (೫೫) ಎಂಬವರು ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟ ಘಟನೆ ಜನರ ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ- ಸಾಮಾಜಿಕ ಸಂಘಟನೆಗಳು ಅಪಘಾತದ ಹೊಣೆಗಾರಿಕೆ ಯನ್ನು ನಗರಸಭೆ ವಹಿಸಿಕೊಳ್ಳಬೇಕೆಂದು ಆಗ್ರಹಿಸಿ ಆಂದೋಲನ ನಡೆಸಿವೆ. ಇದರ ಬೆನ್ನಲ್ಲೇ ಶಾಸಕ ಕಲ್ಲಟ್ರ ಮಾಹಿನ್‌ರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಇತರ ಜನ ಪ್ರತಿನಿಧಿಗಳು ಸೇರಿ ನಡೆಸಿದ ಚರ್ಚೆಯಲ್ಲಿ ನಗರದ ಸಾರಿಗೆ ಸಮಸ್ಯೆಗೆ ಪರಿಹಾರ ಕಾಣುವು ದಕ್ಕಿರುವ ನಿರ್ದೇಶ ಗಳನ್ನು ನೀಡಿದ್ದರು.
ನಗರದಲ್ಲಿ ಸಂಚಾರ ಮೊಟಕು ಅತ್ಯಂತ ಹೆಚ್ಚು ಕಂಡುಬರುವ ಸ್ಥಳಗಳನ್ನು ಪತ್ತೆಹಚ್ಚಿ ಪರಿಹಾರ ಕಂಡುಕೊಳ್ಳಬೇಕೆಂದು ಇದಕ್ಕಿರುವ ಸಮಗ್ರ ಯೋಜನಾ ದಾಖಲೆ ಸಿದ್ಧಪಡಿಸಲು ಎಲ್‌ಬಿಎಸ್ ಇಂಜಿನಿ ಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ಹೊಣೆ ನೀಡಲಾಗಿತ್ತು. ರಸ್ತೆ ಅಗಲೀಕರಣಗೊ ಳಿಸುವುದು ಸಹಿತದ ಕ್ರಮಗಳ ಬಗೆಗಿನ ಕಾರ್ಯಗಳು ನಗರಸಭೆಯ ನೇತೃತ್ವದಲ್ಲಿ ಆರಂಭಗೊಂಡಿದೆ. ಇದಕ್ಕಾಗಿ ಸ್ಥಳ ವಸೂಲು ಮಾಡುವುದಕ್ಕೆ ಎಂ.ಜಿ ರಸ್ತೆಯಲ್ಲಿ ಅತ್ಯಂತ ಹೆಚ್ಚು ದಟ್ಟಣೆ ಕಂಡುಬರುವ ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಂಡಿರುವ ಭಾಗದ ವ್ಯಾಪಾ ರಿಗಳೊಂದಿಗೆ ನಗರಸಭೆಯ ನೇತೃತ್ವದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸಂಚಾರ ತಡೆ ತೀವ್ರಗೊಂಡ ರಾಷ್ಟ್ರೀಯ ಹೆದ್ದಾರಿಯ ಹೊಸ ಬಸ್ ನಿಲ್ದಾಣ ಪರಿಸರ, ನಾಯಕ್ಸ್ ರಸ್ತೆ, ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿ ಮೊದಲಾದ ಕಡೆಗಳಲ್ಲೆಲ್ಲಾ ಸಂಚಾರ ದಟ್ಟಣೆ ನಿಯಂತ್ರಿಸಲು, ಸಾರಿಗೆ ಸಂಚಾರ ಸುಗಮಗೊಳಿಸಲಿರುವ ಕ್ರಮಗಳನ್ನು ನಗರಸಭೆಯ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಇದರ ಅಂಗವಾಗಿ ಸರ್ವೀಸ್ ರಸ್ತೆಯನ್ನು ವನ್‌ವೇಯಾಗಿ ಮಾಡಲು ಶಿಫಾರಸು ಮಾಡಲಾಗಿದೆ. ನಗರಸಭಾ ಕಾರ್ಯಾಲ ಯದಲ್ಲಿ ಜರಗಿದ ಸಭೆಯಲ್ಲಿ ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ಅಧ್ಯಕ್ಷ, ನಗರಸಭಾಧ್ಯ ಕ್ಷೆಯಾದ ಶಾಹಿನ ಸಲೀಂ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಕೆ.ಎಂ. ಹನೀಫ್, ನಗರಸಭಾ ಕಾರ್ಯದರ್ಶಿ ಶಾಜು, ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಮಧು, ಸುಧಾಕರನ್, ಜಲ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ವಿ.ಐ. ಡೈಸಿ, ಇರಿಗೇಶನ್ ಅಸಿಸ್ಟೆಂಟ್ ಇಂಜಿನಿಯರ್ ಟೋನಿ ಮ್ಯಾಥ್ಯು, ಮೋಟಾರು ವಾಹನ ಇಲಾಖೆ ಪ್ರತಿನಿಧಿಗಳು ಎಂಬಿವರು ಸಭೆಯಲ್ಲಿ ಭಾಗವಹಿಸಿದರು.






