ಬಾಯಾರು: ನೂತನ ಗಣೇಶ ಮಂದಿರ ಲೋಕಾರ್ಪಣೆ, ಗಣೇಶೋತ್ಸವ ಇಂದಿನಿಂದ

ಬಾಯಾರು: ಮುಳಿಗದ್ದೆ ಗಣೇಶಗಿರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನೂತನ ಗಣೇಶ ಮಂದಿರ ಲೋಕಾರ್ಪಣೆ ಹಾಗೂ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದಿನಿಂದ 15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇಂದು ಅಪರಾಹ್ನ 3 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಗಣೇಶಗಿರಿಗೆ ಹೊರಡಲಿದೆ. ನಾಳೆ ಬೆಳಿಗ್ಗೆ 8.30ರ ವೇಳೆ ನೂತನ ಮಂದಿರದ ಪ್ರವೇಶೋತ್ಸವ, 1೦.3೦ಕ್ಕೆ ಗಣೇಶಮಂದಿರ ಲೋಕಾರ್ಪಣೆ, ಸಭೆ, ಅಪರಾಹ್ನ 2ರಿಂದ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿದ್ಯ, ಸಂಜೆ ೬ಕ್ಕೆ ರಜತ ನೃತ್ಯಾಂತರ್ಯಾನ, ಭರತನಾಟ್ಯ, 14ರಂದು ಬೆಳಿಗ್ಗೆ 6.3೦ಕ್ಕೆ ಶ್ರೀ ವಿಘ್ನೇಶನ ಮೂರ್ತಿ ಪ್ರತಿಷ್ಠೆ, ಗಣಪತಿ ಹವನ, ಮಧ್ಯಾಹ್ನ ೧ರಿಂದ ಯಕ್ಷಗಾನ ತಾಳಮದ್ದಳೆ, 6.3೦ರಿಂದ ಯಕ್ಷಗಾನ ಬಯಲಾಟ, 15ರಂದು ಬೆಳಿಗ್ಗೆ 1೦.3೦ಕ್ಕೆ ಸಮಾರೋಪ ಸಮಾರಂಭ, ಅಪರಾಹ್ನ 3 ಗಂಟೆಗೆ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ.

RELATED NEWS

You cannot copy contents of this page