ಪೈವಳಿಕೆ: ಕೇರಳವನ್ನು ಕತ್ತಲೆಯತ್ತ ನೂಕುತ್ತಿರುವ ಅಘೋಷಿತ ವಿದ್ಯುತ್ ಕಡಿತ ವಿರುದ್ಧ ಡಿವೈಎಫ್ಐ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪೈವಳಿಕೆ ಕೆಎಸ್ಇಬಿ ಕಚೇರಿಗೆ ದೊಂದಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ನಾಸರುದ್ದೀನ್ ಮಲಂಕರ ಉದ್ಘಾಟಿಸಿದರು. ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯ ಅಬ್ದುಲ್ ಹಾರೀಸ್, ಜಕಾರಿಯ ಬಾಯಾರ್, ಡಿಫಿ ಬ್ಲೋಕ್ ಸಮಿತಿ ಸದಸ್ಯ, ಅಬ್ದುಲ್ ಆಸಿಫ್, ಪ್ರಜ್ವಲ್ ಡಿ, ಅಜಿತ್ ಶೆಟ್ಟಿ ಲಾಲ್ಭಾಗ್, ಸತ್ತಾರ್ ಬೊಳ್ಳೂರು ಮಾತನಾಡಿದರು. ವಿನಯ್ ಕುಮಾರ್ ಸ್ವಾಗತಿಸಿದರು.






