ಅಂಗಡಿಯಿಂದ ಮೋಟಾರ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ದುರಸ್ತಿ ಕೆಲಸಕ್ಕಾಗಿ ಅಂಗಡಿಯಲ್ಲಿ ಇರಿಸಿದ್ದ ಮೋಟಾರ್ ಪಂಪನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಪೊಲೀಸರು ಕಾಸರಗೋಡು ನಿವಾಸಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಚಿಟ್ಟಾರಿಕಲ್ ಕಡುಮೇನಿ ನಿವಾಸಿ ಥೋಮಸ್ (52) ಬಂಧಿತ ಆರೋಪಿ.

ಕಣ್ಣೂರು ತೆಕ್ಕಿಬಜಾರ್‌ನಲ್ಲಿ ಅಂಗಡಿಯಲ್ಲಿ ದುರಸ್ತಿ ಕೆಲಸಕ್ಕಾಗಿ ಸಲಾಂ ಎಂಬವರು ತಂದಿರಿಸಿದ್ದ 18,೦೦೦ ರೂ. ಮೌಲ್ಯದ ಮೋಟಾರ್ ಪಂಪನ್ನು ಸೆ. 6ರಂದು ಕಳವುಗೈದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು.  ಇದಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಪರಿಸರದ ಸಿಸಿ ಟಿವಿಯಲ್ಲಿ ಆರೋ ಪಿಯ ದೃಶ್ಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ನಡೆಸಿದ ಶೋಧದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

You cannot copy contents of this page