ಅನಧಿಕೃತ ಮೀನುಗಾರಿಕೆ: ಕರ್ನಾಟಕ ಬೋಟ್ ವಶಕ್ಕೆ; 2 ಲಕ್ಷ ರೂ. ದಂಡ ವಸೂಲಿ

ಕಾಸರಗೋಡು: ಕೇರಳದ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರದೇಶದಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕ ರಾಜ್ಯದ ನೋಂದಾವಣೆ ಹೊಂದಿರುವ ನೂರ್ ಇ ಬಹಾರ್ ಎಂಬ ಹೆಸರಿನ ಯಾಂತ್ರೀಕೃತ ಬೋಟನ್ನು ಮೀನುಗಾರಿಕಾ ಇಲಾಖೆಯ ಕಾಸರಗೋಡು ಸಹ ನಿರ್ದೇಶಕ ಕೆ. ಶ್ರೀಜೇಶ್‌ರ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡಿದೆ. ಚೆರುವತ್ತೂರಿನ ಮಡಕ್ಕರ ಸಮುದ್ರ ಕಿನಾರೆಯಿಂದ ಸುಮಾರು ಒಂಭತ್ತು ನೋಟಿಕ್ಕಲ್ ಮೈಲು ದೂರದ ಸಮುದ್ರದಿಂದ ನಿನ್ನೆ ಬೋಟ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಹ ನಿರ್ದೇಶನ ನೇತೃತ್ವದಲ್ಲಿ ಮೀನುಗಾರಿಕಾ ಇಲಾಖೆಯ ಸಿವಿಲ್ ಆಫೀಸರ್ ಅರ್ಜುನ್ ಬಿ. ಪೊದುವಾಳ್, ಸಮುದ್ರ ಭದ್ರತಾ ಗಾರ್ಡ್‌ಗಳಾದ ಅಶ್ಪಾಕ್ ಅಲಿ, ರಾಜೇಶ್, ಮೀನುಗಾರಿಕಾ ಬಂದರು ಗಾರ್ಡ್‌ಗಳಾದ ಶಿವಕುಮಾರ್ ಮತ್ತು ಧನೀಶ್‌ರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ವಶಪಡಿಸಲಾದ ಬೋಟ್‌ನಲ್ಲಿದ್ದ ಮೀನುಗಳನ್ನು ನಂತರ ಮಡಕ್ಕರಕ್ಕೆ ತಂದು ಒಂದೂವರೆ ಲಕ್ಷ ರೂ.ಗೆ ಹರಾಜು ಮಾಡಲಾಯಿತು. ನಂತರ ಈ ಬೋಟ್‌ಗೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಶೈನಿಯವರು ಎರಡು ಲಕ್ಷ ರೂ. ದಂಡ ವಿಧಿಸಿದರು. ಇಂತಹ ಕಾರ್ಯಾ ಚರಣೆಯನ್ನು ಇನ್ನಷ್ಟು ತೀವ್ರಗೊಳಿಸ ಲಾಗುವುದೆಂದು ಅವರು ತಿಳಿಸಿದ್ದಾರೆ.

You cannot copy contents of this page