ಶಬರಿಮಲೆ ದೇಗುಲದಿಂದ ಚಿನ್ನದ ಕಿರೀಟ ನಾಪತ್ತೆ : ಬದಲಾಗಿ ಇರಿಸಿದ್ದು ಚಿನ್ನಲೇಪಿತ ಕಿರೀಟ

ಪತ್ತನಂತಿಟ್ಟ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲುಗಳ ಚಿನ್ನ ಲೇಪಿತ ಕವಚಗಳು ಸೇರಿದಂತೆ ಹಲವು ಅಮೂಲ್ಯ ಸೊತ್ತುಗಳನ್ನು ಕಳವುಗೈದ ಸಂಬಂಧ  ಹೈಕೋರ್ಟ್‌ನ ಮೇಲ್ನೋಟದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವಂತೆಯೇ  ಶಬರಿಮಲೆ ಕ್ಷೇತ್ರದಿಂದ 55.72 ಪವನ್‌ನ ಚಿನ್ನದ ಕಿರೀಟವೂ ನಾಪತ್ತೆಯಾದ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕ್ಷೇತ್ರದ ಭದ್ರತಾ ಕೊಠಡಿಯೊಳಗಿರಿಸಲಾಗಿರುವ  ಚಿನ್ನ ಸಹಿತ ಇತರ ಅಮೂಲ್ಯ ವಸ್ತುಗಳ ಲೆಕ್ಕಾಚಾರ ನಡೆಸುತ್ತಿದ್ದ ವೇಳೆ ಅಲ್ಲಿದ್ದ ಚಿನ್ನದ ಕಿರೀಟ ನಾಪತ್ತೆಯಾಗಿ ರುವುದನ್ನು  ಖಚಿತಪಡಿಸಲಾಗಿದೆ. ತಮಿಳುನಾಡಿನ ಭಕ್ತರೊಬ್ಬರು 2012 ಅಗೋಸ್ತ್ ತಿಂಗಳಲ್ಲಿ ಈ ಚಿನ್ನದ ಕಿರೀಟವನ್ನು ಕ್ಷೇತ್ರಕ್ಕೆ  ಕಾಣಿಕೆಯಾಗಿ ಸಮರ್ಪಿಸಿದ್ದರು.  ಆ ಕಿರೀಟವನ್ನು  ದೇವಸ್ಥಾನದ ಭದ್ರತಾಕೊಠಡಿ ಯಲ್ಲಿರಿಸಲಾಗಿತ್ತು.  ಅದು  ನಾಪತ್ತೆ ಯಾಗಿರುವುದಾಗಿ ಇದೀಗ ತಿಳಿದುಬಂದಿದೆ. ಅದರ ಬದಲಾಗಿ ಅದೇ ಆಕೃತಿಯ ಚಿನ್ನ ಲೇಪಿತ ನಕಲಿ ಕಿರೀಟವನ್ನು ಭದ್ರತಾ ಕೊಠಡಿಯಲ್ಲಿರಿಸಲಾಗಿದೆಯೆಂದೂ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.  ಅಸಲಿ ಚಿನ್ನದ ಕಿರೀಟದಲ್ಲಿ ವಜ್ರದ ಕಲ್ಲು ಅಳವಡಿಸಲಾಗಿತ್ತು. ಅದನ್ನು ತೆಗೆದು  ನಕಲಿ ಕಿರೀಟದಲ್ಲಿ  ವಜ್ರವನ್ನು ಹೋಲುವ ಕಲ್ಲು ಅಳವಡಿಸಿರುವು ದಾಗಿಯೂ ಪತ್ತೆಹಚ್ಚಲಾಗಿದೆ.  ಅಸಲಿ ಚಿನ್ನದ ಕಿರೀಟದಲ್ಲಿ 445.78 ಗ್ರಾಂ ಚಿನ್ನವಿದೆಯೆಂದು ಅದರಲ್ಲಿ ದಾಖಲಿ ಸಲಾಗಿತ್ತು. ಅದರ ಬದಲು ತಂದಿರಿಸ ಲಾದ ನಕಲಿ ಕಿರೀಟದಲ್ಲಿ 240 ಗ್ರಾಂ ಚಿನ್ನ ವಿ ದೆಯೆಂದು  ದಾಖಲಿಸಿರುವುದಾ ಗಿಯೂ ಪರಿಶೀಲನೆಯಲ್ಲಿ ಪತ್ತೆಹಚ್ಚ ಲಾಗಿದೆ.  ಈ ಬಗ್ಗೆ ಸಮಗ್ರ ತನಿಖೆ ಆರಂಭ ಗೊಂಡಿದೆ. ಇದೇ ಸಂದರ್ಭ ದಲ್ಲಿ  ಶಬರಿಮಲೆ ದೇಗುಲದ ಚಿನ್ನದ ಕಿರೀಟನಷ್ಟಗೊಂಡಿ ಲ್ಲವೆಂದೂ ಅದು ಸುರಕ್ಷಿತವಾಗಿದೆ ಯೆಂದು ಮುಜರಾಯಿ ಮಂಡಳಿಯ ತಿರುವಾಭರಣ ವಿಭಾಗದ ಆಯುಕ್ತರು ತಿಳಿಸಿದ್ದಾರೆ. ಆದರೆ ದೇಗುಲದ  ಕೆಲವು ವಸ್ತುಗಳಿಗೆ ಸಂಬಂಧಿಸಿ ಈಗಲೂ ಸಂಶಯಗಳಿವೆ ಯೆಂದು ಅವರು ತಿಳಿಸಿದ್ದಾರೆ.

ಶಬರಿಮಲೆ ದೇಗುಲದಿಂದ ಚಿನ್ನ ಕಳವು ನಡೆದ ಹಿನ್ನೆಲೆಯಲ್ಲಿ  ದೇಗುಲದ ಭದ್ರತಾ ಕೊಠಡಿಯಲ್ಲಿರಿ ಸಲಾದ ಚಿನ್ನ ಸೇರಿದಂತೆ ಅಮೂಲ್ಯ ವಸ್ತುಗಳ ಪರಿಶೀಲನೆಗಾಗಿ ರಾಜ್ಯ ಹೈಕೋರ್ಟ್ ನೇಮಿಸಿದ ಅಮಿ ಕಸ್ ಕ್ಯೂರಿ ಜಸ್ಟೀಸ್ ಕೆ.ಟಿ. ಶಂಕರ್ ನೇತೃತ್ವದ ತಂಡ ಕ್ಷೇತ್ರದ ಎಲ್ಲಾ ಅ ಮೂಲ್ಯ ವಸ್ತುಗಳ ಪರಶೀಲನೆ ನಡೆಸುತ್ತಿದೆ.

You cannot copy contents of this page