ಕಾಸರಗೋಡು: ಕಾಸರಗೋಡಿನಲ್ಲಿ ನಡೆದ ಮೂರು ದಿನಗಳ ಮುಸ್ಲಿಂ ಯೂತ್ ಲೀಗ್‌ನ ಜಿಲ್ಲಾ ಸಮ್ಮೇಳನ ನಿನ್ನೆ ಸಮಾಪ್ತಿಗೊಂಡಿತು. ಸಮ್ಮೇಳನದ ಸಮಾರೋಪದಂಗವಾಗಿ ನಿನ್ನೆ ಸಂಜೆ ತಾಯಲಂಗಾ ಡಿಯಿಂದ ರ‍್ಯಾಲಿ ಆರಂಭಗೊಂಡು ಪಿಲಿಕುಂಜೆ ಯಲ್ಲಿ ಸಮಾಪ್ತಿಗೊಂಡಿತು. ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಸಹೀರ್ ಆಸೀಫ್, ಕೋಶಾಧಿಕಾರಿ ಎಂ. ಶಾನವಾಸ್, ರಾಜ್ಯ ಸಮಿತಿ ಸದಸ್ಯ ರುಗಳಾದ ಟಿ.ಡಿ ಕಬೀರ್, ಯೂಸುಫ್ ಉಳ್ವಾರು ಮೊದಲಾದವರು ರ‍್ಯಾಲಿಗೆ ನೇತೃತ್ವ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದಾಗಿ ಸಹಸ್ರಾರು ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದರು. ನಂತರ ನಡೆದ ಬಹಿರಂಗ ಸಮ್ಮೇಳನವನ್ನು ಮುಸ್ಲಿಂ ಯೂತ್ ಲೀಗ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಪಿ.ಕೆ. ಪಿರೋಸ್ ಉದ್ಘಾಟಸಿದರು. ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರ ಮಾಹಿನ್, ಎಕೆಎಂ ಅಶ್ರಫ್, ಪಿ.ಕೆ. ನವಾಜ್, ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಿಮಾನ್, ಟಿ.ಎಂ. ಮುನೀರ್ ಹಾಜಿ, ಸಹೀರ್ ಆಸಿಫ್, ಸಿ.ಟಿ. ಅಹಮ್ಮದಲಿ, ಎನ್.ಎ. ನೆಲ್ಲಿಕುನ್ನು ಮೊದಲಾದವರು ಮಾತ ನಾಡಿದರು. ಜಿಲ್ಲಾ ಸಮ್ಮೇಳನದಂಗವಾಗಿ ನಡೆದ ಪ್ರತಿನಿಧಿ ಸಮ್ಮೇಳನವನ್ನು ರಾಜ್ಯಾ ಧ್ಯಕ್ಷ ಪಾಣಕ್ಕಾಡ್ ಮುನವರಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು ಅಧ್ಯ ಕ್ಷತೆ ವಹಿಸಿದರು. ಹಲವರು ಮಾತ ನಾಡಿದರು. ಸಮ್ಮೇಳನದಂ ಗವಾಗಿ ಯೂತ್ ಲೀಗ್ ನೇತಾರರು ಪಾಲ್ಗೊಂಡ ಪ್ಲಾಶ್ ಬ್ಯಾಕ್ ನೇತೃತ್ವ ಸಂಗಮ ಕಾರ್ಯಕ್ರಮ ನಡೆಸಲಾಯಿತು.







