ಪೆರಿಂಗಡಿಯಲ್ಲಿ ಕಡಲ್ಕೊರೆತ ಮುಂದುವರಿಕೆ ರಸ್ತೆ, ಮೈದಾನ ಸಮುದ್ರಪಾಲು ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಳೆದ ಒಂದು ವಾರದಿಂದ ಕಡಲ್ಕೊ ರೆತ ಮುಂದುವರಿಯುತ್ತಿದ್ದು, ಇಲ್ಲಿನ ರಸ್ತೆ, ಮೈದಾನ ಸಮುದ್ರ ಪಾಲಾಗಿದೆ. ಹಲವಾರು ಕುಟುಂಬಗಳು ಆತಂಕದಲ್ಲಿದೆ. ಈ ಪರಿಸರದಲ್ಲಿ ಕಡಲ್ಕೊರೆತವನ್ನು ತಡೆಯಲು ವರ್ಷಗಳ ಹಿಂದೆ ನಿರ್ಮಿಸಿದ ಮರಳು ಚೀಲ ಕೂಡ ಸಮುದ್ರಪಾಲಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮನೆಗಳು ನೀರು ಪಾಲಾಗುವ ಸಾಧ್ಯತೆ ಇದ್ದು ತಡೆಗೋಡೆ ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಪೆರಿಂಗಡಿ- ಮುಟ್ಟಂಗೇಟ್ ಸಮುದ್ರ ತೀರ ರಸ್ತೆ ಕಳೆದ ವರ್ಷ ಸಮುದ್ರಪಾಲಾಗಿ ಈಗ ವಾಹನ ಸಂಚಾರ ಮೊಟಕುಗೊಂಡಿದೆ.

You cannot copy contents of this page